ಮೂಡುಬಿದಿರೆ: ಯುನಿಮನಿ ವಿದೇಶಿ ಶಿಕ್ಷಣ ನೆರವು ವಿಜೇತರಿಗೆ ಗೌರವ
ಮೂಡುಬಿದಿರೆ: ಯುನಿಮನಿ ವಿದೇಶಿ ಶಿಕ್ಷಣ ನೆರವು ವಿಜೇತರಿಗೆ ಗೌರವ
ಮೂಡುಬಿದಿರೆ: ಯುನಿಮನಿ ಸಂಸ್ಥೆಯ ವತಿಯಿಂದ ವಿದೇಶದಲ್ಲಿ ಶಿಕ್ಷಣಕ್ಕೆ ನೆರವು ರಾಷ್ಟ್ರಮಟ್ಟದ ಅದೃಷ್ಟಶಾಲಿಗಳ ಆಯ್ಕೆಯಲ್ಲಿ ವಿಜೇತರಾದ ಪ್ರಸ್ತು ತ ಜರ್ಮನಿಯಲ್ಲಿ ವ್ಯಾಸಂಗ ನಿರತ ಮೂಡುಬಿದಿರೆಯ ಕುಮಾರಿ ಸ್ಪೂರ್ತಿ ಅವರಿಗೆ ಐವತ್ತು ಸಾವಿರ ರೂಪಾಯಿಗಳ ಚೆಕ್ಕನ್ನು ಆಕೆಯ ಹೆತ್ತವರಾದ ಸುಧಾಕರ ಹೆಗಡೆ ದಂಪತಿಯನ್ನು ಗೌರವಿಸಿ ಯುನಿಮೋನಿ ಸಂಸ್ಥೆಯ ವಲಯ್ಯಾಧ್ಯಕ್ಷ ಶರತ್ ಶನಿವಾರ ಹಸ್ತಾಂತರಿಸಿದರು.
ಉದ್ಯಮಿ, ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್ಅ ಧ್ಯಕ್ಷ ಕೆ.ಶ್ರೀಪತಿ ಭಟ್, ಉದ್ಯಮಿ ವಾಸು ಪೂಜಾರಿ,ಆಳ್ವಾಸ್ ಎಜುಕಶನ್ ಫೌಂಡೇಶನ್ ಹಣಕಾಸು ಅಧಿಕಾರಿ ಶಾಂತರಾಮ ಕಾಮತ್,ಎಸ್.ಕೆ.ಎಫ್ ಎಲಿಕ್ಸರ್ ನ ನಿರ್ದೇಶಕ ಪ್ರಜ್ವಲ್ ಆಚಾರ್, ಅನೂಷಾ ಪಿ. ಆಚಾರ್, ಮೈಟ್ ನ ಮಾನವ ಸಂಪನ್ಮೂಲ ವ್ಯವಸ್ಥಾಪಕಿ ಜೀವಿತ, ಕಿಯೋನಿಕ್ಸ್ ಮುಖ್ಯಸ್ಥೆ ಹರಿಣಾಕ್ಷಿ ಉಪಸ್ಥಿತರಿದ್ದರು. ಸಂಸ್ಥೆಯ ವ್ಯವಸ್ಥಾಪಕ ಪ್ರವೀಣ್ ಶೆಟ್ಟಿ ಸ್ವಾಗತಿಸಿ ಸಿಬ್ಬಂದಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು. ಆಶಾ ಸಹಕರಿಸಿದರು. ಪ್ರಜ್ಞಾ ವಂದಿಸಿದರು
0 Comments