ನಿಧನ: ವಿಠಲ ಶೆಟ್ಟಿ ತೋಟದ ಮನೆ

ಜಾಹೀರಾತು/Advertisment
ಜಾಹೀರಾತು/Advertisment

 ನಿಧನ: ವಿಠಲ ಶೆಟ್ಟಿ ತೋಟದ ಮನೆ


ಮೂಡುಬಿದಿರೆ: ಹಿರಿಯ ವರ್ತಕ, ರಂಗ ಕಲಾವಿದ ವಿಠಲ ಶೆಟ್ಟಿ ತೋಟದ ಮನೆ (68ವ) ರವಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ , ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಪದವೀಧರರಾಗಿ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು ಎಂಭತ್ತರ ದಶಕದಲ್ಲಿ ಮೂಡುಬಿದಿರೆಯ ಮಾರ್ಕೆಟ್ ಸಂಕೀರ್ಣದಲ್ಲಿ ಶೆಟ್ಟ ಬ್ರದರ್ಸ್ ಫ್ಯಾನ್ಸಿ ಸೆಂಟರ್ ಮೂಲಕ ಗುರುತಿಸಿಕೊಂಡಿದ್ದರು. ಬಳಿಕ ಜವುಳಿ ವರ್ತಕರಾಗಿ, ಜನರಲ್ ಸ್ಟೋರ್ ವರ್ತಕರಾಗಿದ್ದರು.


ಎಂಭತ್ತರ ದಶಕದಲ್ಲಿ ರಂಗ ನಟರಾಗಿ, ಉತ್ತಮ ಕ್ರೀಡಾಪಟುವಾಗಿ ಸಾಂಸ್ಕೃತಿಕ , ಸಾಮಾಜಿಕ ರಂಗದಲ್ಲಿ " ಶೆಟ್ಟಿ ಬ್ರದರ್ಸ್" ಬಳಗದ ಮೂಲಕ ಸಕ್ರಿಯವಾಗಿ ಅವರು ತೊಡಗಿಕೊಂಡಿದ್ದರು.

Post a Comment

0 Comments