ಎಂಸಿಎಸ್ ಬ್ಯಾಂಕಿನಿಂದ ಉಚಿತ ಮೂಳೆ ಸಾಂದ್ರತಾ ಪರೀಕ್ಷಾ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 ಎಂಸಿಎಸ್ ಬ್ಯಾಂಕಿನಿಂದ ಉಚಿತ ಮೂಳೆ ಸಾಂದ್ರತಾ ಪರೀಕ್ಷಾ  ಶಿಬಿರ 


*ಪ್ರಯೋಜನ ಪಡೆದುಕೊಂಡ 110 ಜನ ಫಲಾನುಭವಿಗಳು


ಮೂಡುಬಿದಿರೆ ಕೋ-ಓಪರೇಟಿವ್ ಸರ್ವೀಸ್ ಸೊಸೈಟಿ ಲಿ.ಮೂಡುಬಿದಿರೆ ಮತ್ತು ಎಮ್.ಸಿ.ಲಿಯೋಡ್ ಫಾರ್ಮಾ ಇವುಗಳ ಆಶ್ರಯದಲ್ಲಿ ಉಚಿತ ಮೂಳೆ ಸಾಂದ್ರತಾ ಪರೀಕ್ಷಾ ಶಿಬಿರವು ಭಾನುವಾರ ಬ್ಯಾಂಕಿನ ಸಭಾಭವನದಲ್ಲಿ ನಡೆಯಿತು.


   ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಅವರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯದ ಬಗ್ಗೆ ನಾವು ಇಂದು ವಿಶೇಷವಾಗಿ ಗಮನ ಹರಿಸುವುದು ಅನಿವಾರ್ಯವಾಗಿದೆ. ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.


    ಮೂಳೆ ತಜ್ಞ ಡಾ.ಗುರುಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇಂದು ನಮಗೆ ಕಾಲು, ಕೈ, ಕೀಲು ನೋವುಗಳು ಹೆಚ್ಚಾಗಿ ಕಾಡುತ್ತಿದ್ದು ಇದಕ್ಕೆ ನಮ್ಮ ಬದಲಾದ ಜೀವನ ಶೈಲಿಯೇ ಕಾರಣವಾಗಿದೆ. ಇಂದಿನ ದಿನಗಳಲ್ಲಿ ಮನೆಯಲ್ಲಿ, ಆಫೀಸಿನಲ್ಲಿ, ಕಾರ್ ನಲ್ಲಿ ಎಸಿ ಉಪಯೋಗಿಸುವ ಮೂಲಕ ಸೂರ್ಯನ ಬಿಸಿಲಿನಿಂದ ತಪ್ಪಿಸಿಕೊಳ್ಳುತ್ತಿದ್ದೇವೆ ಇದರಿಂದಾಗಿ ನಮ್ಮ ದೇಹದಲ್ಲಿ ವಿಟಮಿನ್ 'ಡಿ'ಯ ಕೊರತೆ ಕಂಡು ಬರುತ್ತಿದೆ. 

  ಕ್ಯಾಲ್ಸಿಯಂ ತೊಂದರೆಯಿಂದ ಹೆಚ್ಚಾಗಿರುವ ಮೂಳೆ ಸವೆತಗಳಿಗೆ ನಾವು ಕ್ಯಾಲ್ಸಿಯಂ ಯುಕ್ತವಾದ ಆಹಾರ ವಸ್ತುಗಳನ್ನು ಸೇವಿಸಬೇಕು ಮತ್ತು  ದಿನಕ್ಕೆ 30-40 ನಿಮಿಷವಾದರೂ ಸೂರ್ಯ ಬಿಸಿನಲ್ಲಿ ನಿಲ್ಲಬೇಕು ಆಗ ಮಾತ್ರ ನಾವು ಈ ಸಮಸ್ಯೆಗಳನ್ನು ಬಗೆ ಹರಿಸಲು ಸಾಧ್ಯ ಎಂದು ತಿಳಿಸಿದರು.

 ಎಂ.ಸಿ.ಲೊಯೋಡ್ ಫಾರ್ಮಾದ ಕಿರಣ್ ಭಾಗವಹಿಸಿದ್ದರು. ಬ್ಯಾಂಕಿನ ವಿಶೇಷ ಕರ್ತವ್ಯಾಧಿಕಾರಿ ಎಂ.ಚಂದ್ರಶೇಖರ್, ನಿರ್ದೇಶಕರುಗಳು  ಉಪಸ್ಥಿತರಿದ್ದರು.

  ಬ್ಯಾಂಕಿನ ಸಿಬಂದಿ ಸಂತೋಷ್ ನಾಯ್ಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುವೀರ್ ಕಾಮತ್ ವಂದಿಸಿದರು.

  ಒಟ್ಟು 110 ಮಂದಿ ಫಲಾನುಭವಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

Post a Comment

0 Comments