ಅಶ್ವತ್ಥಪುರದಲ್ಲಿ ರಾಮನವಮಿ ಆಚರಣೆ
ಮೂಡುಬಿದಿರೆ, ಏ.17: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಬುಧವಾರ ಶ್ರೀರಾಮ ನವಮಿ ಮಹೋತ್ಸವ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ 5.30ರಿಂದ ಕಾಕಡಾರತಿ, ಪಂಚಾರತಿ, ಪಂಚಪದಿ ನಡೆಯಿತು. ಬಳಿಕ ಪಾದಕಟ್ಟೆ ಉತ್ಸವ ನಡೆಯಿತು.
ವೇ.ಮೂ. ಕಂಚಿಬೈಲು ವಿಘ್ನೇಶ ಭಟ್ ಸುಂದರಕಾಂಡ ಪುರಾಣ ನಡೆಸಿದರು.
ಬಳಿಕ ಚಂದ್ರಕಾಂತ ಭಟ್ ಅವರಿಂದ ಹರಿಕಥೆ ನಡೆಯಿತು. ಮಧ್ಯಾಹ್ನ 12.06 ಗಂಟೆಗೆ ಚಿನ್ನದ ಬಾಲರಾಮನ ಮೂರ್ತಿಯನ್ನು ಚಿನ್ನದ ತೊಟ್ಟಿಲಲ್ಲಿಟ್ಟು ಪೂಜಿಸಲಾಯಿತು. ಬಳಿಕ ಸುಮಂಗಲೆಯರು ತೊಟ್ಟಿಲು ತೂಗಿದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಂದವಾಗಿ ಅರುಣ್ ಗಾಂಗಲ್ ಮತ್ತು ಸ್ವರಪ್ರಿಯಾ ಬೆಹರೆ ಪುಣೆ ಅವರಿಂದ ಭಜನ್ ಸಂಧ್ಯಾ ನಡೆಯಿತು.
ರಾತ್ರಿ ಪಲ್ಲಕಿ ಉತ್ಸವ, ವಾಹನೋತ್ಸವ, ಪುಷ್ಪರಥೋತ್ಸವ ನಡೆಯಿತು.
ಗುರುವಾರ ಮಧ್ಯಾಹ್ನ ಹಗಲು ತೇರು ಹಾಗೂ ರಾತ್ರಿ ಮಹಾರಥೋತ್ಸವ ನಡೆಯಲಿದೆ.
0 Comments