ಕರಸೇವೆ ಮಾಡಿ ಹಿಂದಿರುಗುವಾಗ ಅಪಘಾತಕ್ಕೀಡಾಗ ರಾಮಭಕ್ತರನ್ನು ಭೇಟಿಯಾಗಿ ರಾಮನವಮಿ ಶುಭಾಶಯ ಸಲ್ಲಿಸಿದ ಕೋಟ

ಜಾಹೀರಾತು/Advertisment
ಜಾಹೀರಾತು/Advertisment

 ಕರಸೇವೆ ಮಾಡಿ ಹಿಂದಿರುಗುವಾಗ ಅಪಘಾತಕ್ಕೀಡಾಗ ರಾಮಭಕ್ತರನ್ನು ಭೇಟಿಯಾಗಿ ರಾಮನವಮಿ ಶುಭಾಶಯ ಸಲ್ಲಿಸಿದ ಕೋಟ

ಶ್ರೀ ರಾಮ ನವಮಿಯ ಪ್ರಯುಕ್ತ ಚಿಕ್ಕಮಗಳೂರಿನ ಕರಸೇವಕರಾದ ಕೆ ಪ್ರವೀಣ್ ಬೆಳ್ಳೂರುರವರನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿಯಾಗಿ ರಾಮ ನವಮಿಯ ಶುಭಾಶಯ ಕೋರಿದರು.


ಅಯೋಧ್ಯೆಯಲ್ಲಿ ರಾಮ ಕರಸೇವಕರಾಗಿ ಭಾಗವಹಿಸಿ ಹಿಂದಿರುಗುವಾಗ ಅಪಘಾತಕ್ಕೀಡಾಗಿ ನಡೆಯಲಾರದ ಪರಿಸ್ಥಿತಿ ಎದುರಾಗಿತ್ತು. ಕೋಟ ಅವರ ನಿವಾಸಕ್ಕೆ ಭೇಟಿಕೊಟ್ಟು ಶುಭ ಹಾರೈಸಿದ್ದಾರೆ.

 "ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕು ಎಂಬ ಕನಸನ್ನು ಹೊತ್ತು ಕರೆಸೇವಕರಾಗಿ ಧಾವಿಸಿ ಸೇವೆ ಸಲ್ಲಿಸಿದ್ದರು. ಇವರ ಕನಸು ನನಸಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಿದ್ದು ಇವರ ಮೊಗದಲ್ಲಿ ಸಂತಸವನ್ನು ತಂದಿದೆ. ಅವರನ್ನು ಭೇಟಿಯಾಗಿ ರಾಮನವಮಿಯ ಶುಭಾಶಯಗಳು ಸಲ್ಲಿಸಿ ಅವರ ಜೀವನಕ್ಕೆ ಶುಭ ಹಾರೈಸಿದ್ದು ನನ್ನ ಪಾಲಿನ ಸುದಿನ ಎಂದು ಭಾವಿಸುತ್ತೇನೆ. ಅವರಿಗೆ ಶ್ರೀರಾಮಚಂದ್ರನ ಅನುಗ್ರಹ ಸದಾ ಪ್ರಾಪ್ತಿಯಾಗಲಿ" ಎಂದು ಅಭ್ಯರ್ಥಿ ಕೋಟ ತಿಳಿಸಿದ್ದಾರೆ.

Post a Comment

0 Comments