ಮೂಡುಬಿದಿರೆ ತಾಲೂಕು ಪಂಚಾಯತ್ ವತಿಯಿಂದ ಚುನಾವಣಾ ಜಾಗೃತಿ

ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ ತಾಲೂಕು ಪಂಚಾಯತ್ ವತಿಯಿಂದ ಚುನಾವಣಾ ಜಾಗೃತಿ

 ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ‌ ಜಿಲ್ಲಾ‌ಪಂಚಾಯತ್ ಸ್ವೀಪ್ ಸಮಿತಿ, ಮೂಡುಬಿದಿರೆ ತಾಲೂಕು ಪಂಚಾಯತ್ ವತಿಯಿಂದ ಚುನಾವಣಾ ಜಾಗೃತಿ ಮೂಡಿಸುವ ಸಲುವಾಗಿ ಚುನಾವಣಾ ವಿಷಯದ ಕುರಿತು ರಂಗೋಲಿ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಯನ್ನು ತಾಲೂಕು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗದವರಿಗೆ ದಿನಾಂಕ 23/04/2024 ರಂದು ವಾಲ್ಪಾಡಿ ಗ್ರಾಮ‌ ಪಂಚಾಯತ್ ಆವರಣದಲ್ಲಿ ಆಯೋಜಿಸಲಾಯಿತು.



ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಾದ ಎಸ್.‌ವೆಂಕಟಾಚಲಪತಿ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜನರ ಮತದಾನ ಹೆಚ್ಚಿಸುವಿಕೆಯಲ್ಲಿ ಗ್ರಾಮ ಪಂಚಾಯತ್ ಗಳ ಪಾತ್ರ ಹೆಚ್ಚಿದೆ. ಚುನಾವಣಾ ಆದೇಶದಂತೆ ತಾಲೂಕಿನಲ್ಲಿ ನಿರಂತರವಾಗಿ ಸ್ವೀಪ್ ಸಮಿತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮತದಾನದ ಮಹತ್ವ, ಜವಾಬ್ದಾರಿಯನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿರುತ್ತೇವೆ. ಇನ್ನು ಕೇವಲ ಎರಡು ದಿನಗಳಿದ್ದು, ಮತಗಟ್ಟೆಯಲ್ಲಿ ಹೆಚ್ಚಿನ ಜನರು ಮತದಾನ ಮಾಡುವಂತೆ ನೋಡಿಕೊಂಡು ತಮ್ಮ ವಿಶ್ವಾಸಿಗಳಿಗೂ ಮತದಾನ ಮಾಡುವಂತೆ ತಿಳಿಸಿ ಎಂದರು.‌ ಬಳಿಕ ಮತದಾನ ಕುರಿತ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. 


ರಂಗೋಲಿ ಸ್ಪರ್ಧೆಗೆ ಮೂಡುಬಿದಿರೆ ಧವಳ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುದೀಪ್ ಬುನಾನ್ ಅವರು ತೀರ್ಪುಗಾರರಾಗಿ ತೀರ್ಪು ನೀಡಿದರು.

ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಸಾಯಿಶ ಚೌಟ ಅವರು ಕಾರ್ಯಕ್ರಮವನ್ನು‌ ನಿರೂಪಿಸಿ, ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಿಬ್ಬಂದಿಗಳು,  ಗ್ರಾಮ‌ ಪಂಚಾಯತ್ ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Post a Comment

0 Comments