ದ್ವಿತೀಯ ಪಿಯುಸಿ ಫಲಿತಾಂಶ: ಮೂಡುಬಿದಿರೆಯ ಎಕ್ಸಲೆಂಟ್ ನ ಗುಣಸಾಗರ್ ಗೆ 2ನೇ ರ್ಯಾಂಕ್, ಭಾರ್ಗವಿಗೆ 5 ನೇ ರ್ಯಾಂಕ್
ಮೂಡುಬಿದಿರೆ: ಪಿಯುಸಿ ಪರೀಕ್ಷೆಯಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಗುಣಸಾಗರ್ ಸೈನ್ಸ್ ನಲ್ಲಿ ರಾಜ್ಯಕ್ಕೆ ೨ನೇ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ 5 ನೇ ಸ್ಥಾನವನ್ನು ಪಡೆದಿರುವ ಭಾರ್ಗವಿ ರಾಜ್ ಅವರನ್ನು ಕಾಲೇಜಿನಲ್ಲಿ ಸಿಹಿ ತಿನ್ನಿಸಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮತ್ತು ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಸಂಸ್ಥೆಯ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಗುಣಸಾಗರ್ ಅವರ ಹೆತ್ತವರಾದ ತುಮಕೂರಿನ ದಯಾನಂದ ಟಿ.ಎಸ್., ಸವಿತಾ, ಪಿಆರ್ ಓ ಚೈತ್ರಾ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments