ದ್ವಿತೀಯ ಪಿಯುಸಿ ಫಲಿತಾಂಶ: ವೈಬ್ರೆಂಟ್ ಕಾಲೇಜಿಗೆ ಶೇ.100% ಸಾಧನೆ
ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿ ಕಳೆದೆರಡು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ವರ್ಷದಲ್ಲಿ ಶೇ 100 ಫಲಿತಾಂಶದಲ್ಲಿ ದಾಖಲಿಸುವ ಮೂಲಕ ಅತ್ಯುತ್ತಮ ಸಾಧನೆಗೈದಿದೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಾಲೇಜು ಶೇ.100ರಷ್ಟು ಫಲಿತಾಂಶ ಪಡೆದು ಕಾಲೇಜಿನ ಚೊಚ್ಚಲ ಫಲಿತಾಂಶದಲ್ಲೇ ಐತಿಹಾಸಿಕ ಸಾಧನೆ ಮಾಡಿದ ರಾಜ್ಯದ ಅತ್ಯುತ್ತಮ ಪಿಯು ಕಾಲೇಜುಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿದ್ಯಾರ್ಥಿಗಳಾದ ಆರ್ ಚಂದನ್ ಮತ್ತು ಸಿಂಚನಾ ಅರಸ್ ಕ್ರಮವಾಗಿ 589 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ ಹತ್ತನೇ ರ್ಯಾಂಕ್ ಗಳಿಸಿರುತ್ತಾರೆ. 28 ವಿದ್ಯಾರ್ಥಿಗಳು ಶೇ.95%ಕ್ಕಿಂತಲೂ ಹೆಚ್ಚು ಅಂಕ ಗಳಿಸಿ ಅತ್ಯುನ್ನತ ಸಾಧನೆ ಮಾಡಿರುತ್ತಾರೆ. ಉನ್ನತ ಶ್ರೇಣಿಯಲ್ಲಿ 95. ಪ್ರಥಮ ಶ್ರೇಣಿಯಲ್ಲಿ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ರಸಾಯನಶಾಸ್ತ್ರ 5, ಗಣಿತಶಾಸ್ತ್ರ 10, ಜೀವಶಾಸ್ತ್ರ 15, ಭೌತಶಾಸ್ತ್ರ, ಗಣಕವಿಜ್ಞಾನ ಮತ್ತು ಕನ್ನಡದಲ್ಲಿ ತಲಾ ಒಂದು ವಿದ್ಯಾರ್ಥಿ 100ಕ್ಕೆ 100 ಪೂರ್ಣ ಅಂಕವನ್ನು ಪಡೆದಿರುತ್ತಾರೆ.
ಪ್ರಜ್ವಲ್ ಎಮ್ 586, ಸಮೃದ್ ಕುಂದರಗಿ 585. ಎಚ್ ಎಮ್ ಚಿನ್ಮಯಿ 585, ಅಶ್ವಿನ್ ಉಪಾಧ್ಯಾ 584,
ಸಿಮ್ರಾನ್ ಥಾನೇದರ್ 584, ಎಸ್. ಚೈತನ್ಯ 583, ವರ್ಷಾ ರೆಡ್ಡಿ 583, ಕೆ ಎಸ್ ಸಂಪದ 583, ಶೇಕ್ ಅಬ್ದುಲ್ಲಾ ಮಹದಿ 582, ಕಲ್ಪಿತ ಕೃಷ್ಣ ಘಾಟೆ 582. ರಾಹುಲ್ ಕೆ ಎಸ್ 582, ಜೋಯಲ್ ರೋಬಿನ್ 580 ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ.
ಕಾಲೇಜಿನ ಪ್ರಥಮ ಫಲಿತಾಂಶದಲ್ಲೇ ಸಾಧನೆಗೈದ ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.
0 Comments