ಮಹಿಳಾ ದಿನಾಚರಣೆ- ಸನ್ಮಾನ
ಮೂಡುಬಿದಿರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಬೆಳುವಾಯಿ ವಲಯದ ಮುಗೇರ್ಕಳ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಹಾಗೂ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ತ್ರೀ ಶಕ್ತಿ ಗೊಂಚಲು ಸಭೆ ನಡೆಯಿತು.
ಮುಗೇರ್ಕಳ ಅಂಗನವಾಡಿ ಕೇಂದ್ರದ ಬಾ .ವಿ ಸ.ಅಧ್ಯಕ್ಷೆ ಮಲ್ಲಿಕಾ ಸಭೆಯ ಅಧ್ಯಕ್ಷತೆ ವಹಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಅವರು ಮಹಿಳಾ ಸಬಲೀಕರಣಸ ಬಗ್ಗೆ ಮಾಹಿತಿ ನೀಡಿದರು.
ಸನ್ಮಾನ : ಮುಗೇರ್ಕಳ ಅಂಗನವಾಡಿ ಕೇಂದ್ರದಲ್ಲಿ 31ವರ್ಷ ಗಳಿಂದ ಸೇವೆ ಸಲ್ಲಿಸುತ್ತಿದ್ದು ಸಮಾಜ ಸೇವೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶಿಕ್ಷಕಿ ಶಾಂತ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್ಟ್,ಸದಸ್ಯರಾದ ಯಶೋಧ, ಕುಸುಮ ಭಾರತಿ ಜೈನ್, ನೀಲಯ್ಯ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆ ಯರು, ಸ್ತ್ರೀ ಶಕ್ತಿ ಗುಂಪಿನ ಪದಾಧಿಕಾರಿಗಳು ಸರ್ವಸದಸ್ಯ ರು ಸಂಜೀವಿನಿ ಗುಂಪಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹರ್ಷಾವತಿ ಸ್ವಾಗತಿಸಿದರು.
ಬ್ರಹ್ಮಶ್ರೀ. ನವಶ್ರೀ.ಪದ್ಮಶ್ರೀ .ಸ್ತ್ರೀ ಶಕ್ತಿ ಗುಂಪಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾಗಶ್ರೀ ಪ್ರವೀಣ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಆಶಾ ಧನ್ಯವಾದಗೈದರು.
0 Comments