ತೆಂಕಮಿಜಾರು ಗ್ರಾ.ಪಂ.ನಲ್ಲಿ 17 ಕುಟುಂಬಗಳಿಗೆ ಸಿಂಟೆಕ್ಸ್ ವಿತರಣೆ
ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 17 ಕುಟುಂಬಗಳ ಫಲಾನುಭವಿಗಳಿಗೆ ಶೇ 25ರ ನಿಧಿಯಲ್ಲಿ ಸಿಂಟೆಕ್ಸ್ ವಿತರಣೆ ಮಾಡಲಾಯಿತು.
ಪಂಚಾಯತ್ ಅಧ್ಯಕ್ಷೆ ಶಾಲಿನಿ ಸಾಲ್ಯಾನ್, ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಮಾಜಿ ಅಧ್ಯಕ್ಷೆ ರುಕ್ಮಿಣಿ, ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
0 Comments