ಖೋಖೋದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ
ಮೂಡುಬಿದಿರೆ: ಕ್ಯಾಲಿಕಟ್
ವಿಶ್ವವಿದ್ಯಾಲಯದಲ್ಲಿ ಜನವರಿ 29ರಿಂದ 31ರ ವರೆಗೆ
ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ
ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ
ಮಂಗಳೂರು ವಿಶ್ವವಿದ್ಯಾಲಯವು ದ್ವಿತೀಯ ರನ್ನರ್ ಅಪ್
ಆಗಿದ್ದು, ಮಂಗಳೂರು ವಿಶ್ವವಿದ್ಯಾಲಯವನ್ನು
ಪ್ರತಿನಿಧಿಸಿದ 15 ಕ್ರೀಡಾಪಟುಗಳ ಪೈಕಿ 13 ಮಂದಿ
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು.
ಈ ಪಂದ್ಯಾವಳಿಯಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯ ಪ್ರಥಮ ಸ್ಥಾನ ಪಡೆದಿದ್ದರೆ, ಔರಂಗಬಾದ್‌ನ ಡಾ.ಬಾಬಾ ಸಾಹೇಬ್
ಅಂಬೇಡ್ಕರ್ ಮರಥ್ವಾಡ ವಿಶ್ವವಿದ್ಯಾಲಯ ದ್ವಿತೀಯ
ಸ್ಥಾನ ಪಡೆದಿದೆ.
ಖೇಲೋ ಇಂಡಿಯಾ:
ಯುವ ಖೇಲೋ ಇಂಡಿಯಾ ಖೋಖೋ
ಪಂದ್ಯಾವಳಿಯು ಚೆನ್ನೈನಲ್ಲಿ ಜನವರಿ 26ರಿಂದ
30ರವರೆಗೆ ನಡೆದಿದ್ದು, ಯುವಕರ ಹಾಗೂ
ಯುವತಿಯರ ವಿಭಾಗದ ರಾಜ್ಯ ತಂಡವನ್ನು
ಆಳ್ವಾಸ್ ಕಾಲೇಜಿನ ತಲಾ ಇಬ್ಬರು ವಿದ್ಯಾರ್ಥಿಗಳು
ಪ್ರತಿನಿಧಿಸಿದ್ದಾರೆ.
ಯುವಕರ ತಂಡವನ್ನು ಆಳ್ವಾಸ್ ಕಾಲೇಜಿನ
ಪ್ರಥಮ ಪಿಯುಸಿ ವಿದ್ಯಾರ್ಥಿ ಸಂಗೀತ್ ಗೌಡ ಹಾಗೂ
ದ್ವಿತೀಯ ಪಿಯುಸಿ ವಿದ್ಯಾರ್ಥಿ ರಮೇಶ್ ಪ್ರತಿನಿಧಿಸಿದ್ದು,
ಕರ್ನಾಟಕ ತಂಡವು ತೃತೀಯ ಸ್ಥಾನ ಪಡೆದಿದೆ.
ಯುವತಿಯರ ತಂಡವನ್ನು ಆಳ್ವಾಸ್ ಕಾಲೇಜಿನ
ಪ್ರಥಮ ಬಿಎ ವಿದ್ಯಾರ್ಥಿನಿ ಹಿಮಾನಿ ಹಾಗೂ ಪ್ರಥಮ
ಪಿಯುಸಿ ವಿದ್ಯಾರ್ಥಿನಿ ಅಪೂರ್ವ ಪ್ರತಿನಿಧಿಸಿದ್ದರು.
ಕರ್ನಾಟಕ ಹಾಗೂ ಮಂಗಳೂರು ವಿಶ್ವವಿದ್ಯಾಲಯ
ತಂಡವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.
ಮೋಹನ ಆಳ್ವ ಅಭಿನಂದಿಸಿದ್ದಾರೆ.
0 Comments