ಗ್ರಾಮಾಭಿವೃದ್ಧಿ ಯೋಜನೆಯಿಂದ ಜನಮಂಗಲ ಕಿಟ್ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಗ್ರಾಮಾಭಿವೃದ್ಧಿ ಯೋಜನೆಯಿಂದ ಜನಮಂಗಲ ಕಿಟ್ ವಿತರಣೆ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 9 ಮಂದಿ ಅಸಹಾಯಕರಿಗೆ  ಜನಮಂಗಲ ಕಿಟ್ ನ್ನು ಮಾಸ್ತಿಕಟ್ಟೆ ಅಂಬೇಡ್ಕರ್ ಭವನದಲ್ಲಿ ಮಂಗಳವಾರ  ವಿತರಿಸಲಾಯಿತು.

ವೀಲ್ ಚೈಯರ್ ವಾಕರ್ ಸ್ಟಿಕ್ ವಾಕರ್ ಬೆಡ್  ಸೌಲಭ್ಯವನ್ನು  ಫಲಾನುಭವಿಗಳಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ  ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಜನಜಾಗೃತಿ ವೇದಿಕೆಯ  ವಲಯ ಅಧ್ಯಕ್ಷ ಜೊಸ್ಸಿ ಮಿನೇಜಸ್, ಊರಿನ ಗಣ್ಯರಾದ ಪೃಥ್ವಿರಾಜ್ ಜೈನ್, ತಾಲೂಕು ಯೋಜನಾಧಿಕಾರಿ ಸು‌ನೀತಾ ನಾಯಕ್ ಉಪಸ್ಥಿತರಿದ್ದರು.


 ಸೇವಾ ಪ್ರತಿನಿಧಿ ಅನಿತಾ ಬಲ್ಲಾಳ್ ಎಲ್ಲರನ್ನು ಸ್ವಾಗತಿಸಿದರು. ವಲಯದ ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರ್ವಹಿಸಿದರು.

Post a Comment

0 Comments