ಮೂಡುಬಿದಿರೆ ಕೋ ಆಪರೇಟಿವ್ ಸರ್ವೀಸ್ ಸೊಸೈಟಿ ಚುನಾವಣೆಗೆ ಮಹೇಶ್ ಕುಮಾರ್ ಸ್ಪರ್ಧೆ
ಮೂಡುಬಿದಿರೆ ಕೋ ಆಪರೇಟಿವ್ ಸರ್ವೀಸ್ ಸೊಸೈಟಿಯ ನಿರ್ದೇಶಕ ಸ್ಥಾನಗಳಿಗೆ ಸಾಮಾನ್ಯ ಕ್ಷೇತ್ರದಿಂದ ಮೂಡುಬಿದಿರೆಯ ಕ್ರಿಯಾಶೀಲ ಸೇವಾ ಮನೋಭಾವದ ಯುವಕ ಮಹೇಶ್ ಕುಮಾರ್ ಸ್ಪರ್ಧಿಸಲಿದ್ದಾರೆ.
ಮೂಡುಬಿದಿರೆ ಸ್ವರಾಜ್ ಮೈದಾನ ಬಳಿಯ ನಿವಾಸಿ ರೋಟರಿ ಕ್ಲಬ್, ರೋಟರಾಕ್ಟ್ ಕ್ಲಬ್ ಗಳಲ್ಲಿ ಸಕ್ರೀಯ ಸದಸ್ಯರಾಗಿ ಸಮಾಜ ಮುಖಿಯಾಗಿ ಸೇವೆ ಮಾಡಿರುವ ಅವರು ತನ್ನ ಸೌಮ್ಯ ಸ್ವಭಾವದ ಮೂಲಕ ಜನರ ಪ್ರೀತಿ ಗಳಿಸಿದ್ದಾರೆ. ಉಚಿತ ಆರೋಗ್ಯ ಶಿಬಿರ, ಬದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಶೈಕ್ಷಣಿಕ ಮಾಹಿತಿ, ರಕ್ತದಾನ ಶಿಬಿರಗಳನ್ನು ಸಂಘಟಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಹಕಾರಿ ಕ್ಷೇತ್ರದ ಮೂಲಕವೂ ಮತ್ತಷ್ಟು ಜನರಿಗೆ ಸದುಪಯೋಗವಾಗುವ ಯೋಚನೆಯೊಂದಿಗೆ ಚುನಾವಣೆಗೆ ಅವರು ಸ್ಪರ್ಧಿಸುತ್ತಿದ್ದಾರೆ. ಮಹೇಶ್ ಕುಮಾರ್ ಬಕೆಟ್ ಚಿಹ್ನೆ ಯೊಂದಿಗೆ ಸ್ಪರ್ಧೆಯಲ್ಲಿದ್ದಾರೆ. ಸೊಸೈಟಿಯ ಸದಸ್ಯರು ಜನವರಿ 7ರಂದು ನಡೆಯುವ ಚುನಾವಣೆಯಲ್ಲಿ ಅವರನ್ನು ಮತ ನೀಡಿ ಬೆಂಬಲಿಸುವಂತೆ ಕೂಡ ಕೋರಿಕೊಂಡಿದ್ದಾರೆ.
0 Comments