ಇರುವೈಲಿನಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮಹಾಸಭೆ
ಮೂಡುಬಿದಿರೆ: ಜಯ ಸಿ.ಸುವರ್ಣ ಮತ್ತು ಸೋಮಪ್ಪ ಸುವರ್ಣರ ಕನಸು, ಅವರ ಸಾಧನೆಗಳ ನೆನಪಿನೊಂದಿಗೆ, ಮಹಾಮಂಡಲದ ಸಭೆಯು ಆತ್ಮವಲೋಕನ ಸಭೆಯಾಗಬೇಕು. ಹಿರಿಯರ ಆಸೆ ಕನಸುಗಳ ಉದ್ದೇಶಗಳನ್ನು ಯಶಸ್ವಿಯಾಗಿಸಲು ನಾವು ಪ್ರಯತ್ನಿಸಬೇಕು ಎಂದು ಹೈಕೋರ್ಟ್ನ ಹಿರಿಯ ವಕೀಲ ತಾರನಾಥ ಪೂಜಾರಿ ಹೇಳಿದರು.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ ಸಂಘಟನೆಯ ಅರ್ಧ ವಾರ್ಷಿಕ ಪ್ರಾದೇಶಿಕ ಮಹಾಸಭೆಯನ್ನು ಭಾನುವಾರ ಇರುವೈಲಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದಲ್ಲಿ ಉದ್ಘಾಟಿಸಿ ಮಾತನಾಡಿದರು.
ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಅಧ್ಯಕ್ಷತೆವಹಿಸಿದರು. ಇರುವೈಲು ಬಿಲ್ಲವ ಸಂಘದ ವತಿಯಿಂದ ರಾಜಶೇಖರ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಚಿಕ್ಕಮಗಳೂರು ಸಂಚಾಲಕ ವಾಸು ಪೂಜಾರಿ, ಇರುವೈಲು ಬಿಲ್ಲವ ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ ಮತ್ತಿತರಿದ್ದರು.
ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಗಂಗಾಧರ ಪೂಜಾರಿ ಚೇಳ್ಯಾರು ಅರ್ಧ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಪ್ರಭಾಕರ ಕೆ. ಬಂಗೇರ ಕಾರ್ಕಳ ಲೆಕ್ಕಪತ್ರದ ವಾಚಿಸಿದರು. ಇರುವೈಲು ಬಿಲ್ಲವ ಸಂಘದ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಮಂಡಿಸಿದರು. ಮಹಾಮಂಡಲದ ಕೋಶಾಧಿಕಾರಿ ಪ್ರಭಾಕರ ಕೆ. ಬಂಗೇರ ವಂದಿಸಿದರು.
0 Comments