ಫುಡು ಫೆಸ್ಟಿವಲ್ ಲಾಭಾಂಶ ಬಡವರಿಗೆ: ಬಿರುವೆರ್ ಕುಡ್ಲ ಸಂಘಟನೆಯ ಮಾನವೀಯ ಕಾರ್ಯ
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿರುವ ಸ್ಟ್ರೀಟ್ ಫುಡ್ ಫಿಯೇಷ್ಟಾ ಮಂಗಳೂರು ಇಲ್ಲಿ
ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಪಂಜಾಬಿ ಲಸ್ಸಿ ಎಂಬ ಶಾಪ್ ಮಾಡಿಕೊಂಡು ಐದು ದಿನದಲ್ಲಿ ಬಂದ ಲಾಭದ ಹಣವನ್ನು
ಕ್ಯಾನ್ಸರ್ ಮತ್ತು ಅನಾರೋಗ್ಯದಿಂದ ಬಳಲುತ್ತಿರುವರಿಗೆ ಕುದ್ರೋಳಿ ದೇವಸ್ಥಾನದಲ್ಲಿ ಧನ ಸಹಾಯವನ್ನು ನೀಡಿದರು.
ಈ ಸಹಾಯ ಹಸ್ತದ ಪುಣ್ಯ ಕಾರ್ಯದಲ್ಲಿ ನಿಕಟ ಪೂರ್ವ ಬಿಜೆಪಿ ರಾಜ್ಯ ಅಧ್ಯಕ್ಷರು ಸಂಸದ ಶ್ರೀ ನಳಿನ್ ಕುಮಾರ್ ಮಾತನಾಡಿ ಬಿರುವೆರ್ ಕುಡ್ಲ ಸಂಸ್ಥೆಗೆ ಸಮಾಜದಲ್ಲಿನ ಎಲ್ಲಾ ಕಷ್ಟಗಳನ್ನು ನೀಗಿಸಲು ದೇವರು ಶಕ್ತಿ ನೀಡಲಿ,ಮುಂದೆಯೂ
ಸಂಸ್ಥೆಯಿಂದ ಉತ್ತಮ ಸಮಾಜ ಮುಖಿ ಕೆಲಸ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಭಾಪತಿ ಶ್ರೀ ಯು. ಟಿ. ಖಾದರ್,ಸ್ಥಳೀಯ ಶಾಸಕರಾದ ಶ್ರೀ ಡಿ. ವೇದವ್ಯಾಸ್ ಕಾಮತ್, ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರದ ಅಧ್ಯಕ್ಷರು ಶ್ರೀ ಎಚ್. ಎಸ್ ಸಾಯಿರಾಮ್,ರವಿ ಶಂಕರ್ ಮಿಜಾರ್,ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವ ಅಧ್ಯಕ್ಷರು ಶ್ರೀ ಗಿರಿಧರ್ ಶೆಟ್ಟಿ,ರಣದೀಪ್ ಕಾಂಚನ್,
ಜೋಸೆಫ್ ಕ್ರಾಸ್ತ ಮಾರ್ಟೀನ್,ಮತ್ತಿತರು ಉಪಸ್ಥಿತರಿದ್ದರು.
0 Comments