ಜೇಸಿಐ ತ್ರಿಭುವನ್ ಮೂಡುಬಿದಿರೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ
ಮೂಡುಬಿದಿರೆ: ಜೇಸಿಐ ತ್ರಿಭುವನ್ ಮೂಡುಬಿದಿರೆ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸಮಾಜ ಮಂದಿರದಲ್ಲಿ ನಡೆಯಿತು.
ನಿರ್ಗಮನ ಅಧ್ಯಕ್ಷ ಸುನಿಲ್ ಕುಮಾರ್ ಅವರು ನೂತನ ಅಧ್ಯಕ್ಷ ಜೆಎಂಎಫ್ ಪ್ರದೀಪ್ ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನಂತರ ನೂತನ ಅಧ್ಯಕ್ಷ ಪ್ರದೀಪ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ವಿಘ್ನೇಶ್ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಶುಭ ಹಾರೈಸಿದರು.
ಉಜಿರೆ ಜೇಸಿಐನ ಪೂರ್ವಧ್ಯಕ್ಷ, ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ನ ಮಾಜಿ ಕಾರ್ಯದರ್ಶಿ ಅನಂತಯ್ಯ ಆಚಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪ್ರದೀಪ್ ಕುಮಾರ್ ಅವರು ರುಡ್ ಸೆಟ್ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆಯುತ್ತಿರುವಾಗಲೇ ಹೆಚ್ಚು ಆಸಕ್ತಿಯನ್ನು ಹೊಂದಿದರು. ಹೇಳಿಕೊಟ್ಟದ್ದನ್ನು ಶಿಸ್ತಿನಿಂದ ಕಲಿಯುತ್ತಿದ್ದರು. ಅವರಲ್ಲಿ ಛಲ ಮತ್ತು ಗುರಿಯಿತ್ತು ಆದ್ದರಿಂದಲೇ ಇಂದು ರಾಜ್ಯದ್ಯಂತ ಅತೀ ಹೆಚ್ಚು ಕೌಶಲ ತರಬೇತಿಗಳನ್ನು ನಡೆಸಲು ಸಾಧ್ಯವಾಯಿತು ಎಂದು ಹೇಳಿದರು.
ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮೇನೆಜಿಂಗ್ ಡೈರೆಕ್ಟರ್, ಜಮಖಂಡಿ ಜೇಸಿಐ ಪೂರ್ವಧ್ಯಕ್ಷ ಕೆ.ಎನ್. ಜನಾರ್ದನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ನೂತನ ಸದಸ್ಯರ ಸೇರ್ಪಡೆ : ಜೇಸಿಐಗೆ ಸೇರ್ಪಡೆಗೊಂಡಿರುವ ನೂತನ ಸದಸ್ಯರಾದ ಸಹನಾ, ಸುಧೀರ್,ವಂದಿತ್, ದಯಾನಂದ ಆಳ್ವ ಮತ್ತು ಸುಧೀಶ್ ಅವರನ್ನು ಬರ ಮಾಡಿಕೊಳ್ಳಲಾಯಿತು ಮತ್ತು ಅವರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ನಿರ್ಗಮನ ಅಧ್ಯಕ್ಷ ಸುನೀಲ್ ಕುಮಾರ್ ಅನಿಸಿಕೆಗಳನ್ನು ಹಂಚಿಕೊಂಡಿರುವ ಸಹಕಾರ ನೀಡಿರುವ ಶಾಂತಲಾ ಎಸ್. ಆಚಾರ್ಯ ಸಹಿತ ನಿರ್ಗಮನ ಪದಾಧಿಕಾರಿಗಳನ್ನು ಗೌರವಿಸಿದರು.
ನೂತನ ಕಾರ್ಯದರ್ಶಿ ಸುಧಾಕರ್, ಲೇಡಿ ಚೇರ್ ಪರ್ಸನ್ ಅಕ್ಷತಾ, ಜೆಜೆಸಿ ಚೇರ್ ಪರ್ಸನ್ ಶೈಲೇಶ್ ಆಚಾರ್ಯ ಉಪಸ್ಥಿತರಿದ್ದರು.
ಆಶ್ರಿತಾ ನಿಕಟಪೂರ್ವ ಕಾರ್ಯದರ್ಶಿ ಆಶ್ರಿತಾ ಅತಿಥಿಗಳನ್ನು ಪರಿಚಯಿಸಿದರು. ವರುಣ್ ಕುಮಾರ್ ವಂದಿಸಿದರು.
0 Comments