ಸಂಸತ್ತಿಗೆ ದಾಳಿ:ಬಿಜೆಪಿ ಸಂಸದರ ಮೇಲೆ ದಾಳಿ ಮಾಡಿದ ಉಗ್ರನ ಕಾಲರ್ ಹಿಡಿದು ಬಂಧಿಸಿದ ಸಂಸದ ನಳಿನ್
ದೆಹಲಿಯ ಸಂಸತ್ ಅಧಿವೇಶನದಲ್ಲಿ ಭಾರೀ ಪ್ರಮಾಣದ ಭದ್ರತಾ ವೈಫಲ್ಯ ನಡೆದಿದೆ. ಖಲಿಸ್ತಾನಿ ಉಗ್ರರು ಎನ್ನಲಾದ ಇಬ್ಬರು ಭಯೋತ್ಪಾದಕರು ಟಿಯರ್ ಗ್ಯಾಸ್ ಸ್ಪೋಟಿಸಿ ಆತಂಕ ಸೃಷ್ಟಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸಂಸದರು ಭಯೋತ್ಪಾದಕರನ್ನು ಬಂಧಿಸಲು ಮುಂದಾದಾಗ ಬಿಜೆಪಿ ಸಂಸದರ ಮೇಲೆ ಉಗ್ರನೋರ್ವ ಹಲ್ಲೆಗೆ ಮುಂದಾಗಿದ್ದ. ಸಂಸದರ ಆಸನದ ಮೇಲೆ ಹಾರಿಕೊಂಡು ಬರುತ್ತಿದ್ದ ಉಗ್ರನನ್ನು ಹಿಡಿಯುತ್ತಿದ್ದ ಸಂಸದರ ಮೇಲೆ ಹಲ್ಲೆಗೈದ ಸಂದರ್ಭದಲ್ಲಿ ಅವರ ರಕ್ಷಣೆಗೆ ಮುಂದಾದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲುರವರು ಉಗ್ರನ ಕಾಲರ್ ಹಿಡಿದು ಎಳೆದಾಡಿ ಉಗ್ರನನ್ನು ಹಿಡಿದಿಟ್ಟಿದ್ದಾರೆ. ಆ ಕೂಡಲೇ ಇತರೆ ಸಂಸದರು ಆಗಮಿಸಿ ಉಗ್ರನ ಮೇಲೆ ಹಲ್ಲೆಗೈದಿದ್ದಾರೆ.
ನಂತರ ಆತನನ್ನು ಮಾರ್ಷಲ್‌ಗೆ ಒಪ್ಪಿಸಿದ್ದಾರೆ.



0 Comments