ಎಚ್.ಐ.ವಿ /ಏಡ್ಸ್ ಮಾಹಿತಿ ಕಾರ್ಯಾಗಾರ ಹಾಗೂ ರೆಡ್ ರಿಬ್ಬನ್ ಕ್ಲಬ್‌ನ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಎಚ್.ಐ.ವಿ /ಏಡ್ಸ್ ಮಾಹಿತಿ ಕಾರ್ಯಾಗಾರ ಹಾಗೂ ರೆಡ್ ರಿಬ್ಬನ್ ಕ್ಲಬ್‌ನ ಉದ್ಘಾಟನೆ



ಮೂಡುಬಿದಿರೆ: ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಎಚ್.ಐ.ವಿ/ ಏಡ್ಸ್ ಮಾಹಿತಿ ಕಾರ್ಯಾಗಾರ ಮತ್ತು ರೆಡ್ ರಿಬ್ಬನ್ ಕ್ಲಬ್‌ನ್ನು ಮೂಡುಬಿದಿರೆ  ಐ.ಸಿ.ಟಿ.ಸಿ ಸಲಹೆಗಾರ್ತಿ ದಿವ್ಯಾ  ಉದ್ಘಾಟಿಸಿದರು.

ನಂತರ ಎಚ್.ಐ.ವಿ /ಏಡ್ಸ್ ಗೆ ಸಂಬಂಧಿಸಿದ  ವಿಚಾರಗಳು ಮತ್ತು ಹರಡುವಿಕೆಗೆ ಕಾರಣಗಳು, ಅದು ಹೇಗೆ ಹರಡುತ್ತದೆ. ಹರಡಿದ ನಂತರ ಅದನ್ನು ತಡೆಗಟ್ಟುವ ಕ್ರಮಗಳನ್ನು ತಿಳಿಸಿದರು.  ಎಚ್.ಐ.ವಿ ದಿನದ ಅಂಗವಾಗಿ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ.ಅಜೀತ್ ಕುಮಾರ್ ಡಿಸೋಜಾ ಹಾಗೂ ಎನ್.ಎಸ್.ಎಸ್ ಘಟಕದ ಯೋಜನಾ ಅಧಿಕಾರಿ ರವಿರಾಜ್ ಬಿ.ಜಿ ಮತ್ತು  ಗಾಯತ್ರಿ  ಉಪಸ್ಥಿತರಿದ್ದರು. ಹೃತಿಕಾ ಸ್ವಾಗತಿಸಿದರು. ಎನ್.ಎಸ್.ಎಸ್ ಘಟಕದ ನಾಯಕಿ  ಸುಶ್ಮಿತಾ ನಿರೂಪಿಸಿದರು, ಕುಮಾರಿ ಐಶ್ವರ್ಯ ವಂದಿಸಿದರು.

Post a Comment

0 Comments