ರೈತರಲ್ಲಿ ಹೋರಾಟದ ಕಿಚ್ಚು ಇರಬೇಕು-ಶಾಂತಿಪ್ರಸಾದ್ ಹೆಗ್ಡೆ

ಜಾಹೀರಾತು/Advertisment
ಜಾಹೀರಾತು/Advertisment

 ರೈತರಲ್ಲಿ ಹೋರಾಟದ ಕಿಚ್ಚು ಇರಬೇಕು-ಶಾಂತಿಪ್ರಸಾದ್ ಹೆಗ್ಡೆ 


ಮೂಡುಬಿದಿರೆ:ರೈತ ಸಂಘಟನೆ ಗಟ್ಟಿಯಾಗಬೇಕು. ಹೋರಾಟದ ಕಿಚ್ಚು ಇರಬೇಕು. ಆವಾಗ ಮಾತ್ರ ತಮಗೆ ಸಿಗಬೇಕಾದ ನ್ಯಾಯಯುತ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಭಾರತೀಯ ಕಿಸಾನ್ ಸಂಘ ದ.ಕ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಹೇಳಿದರು.

ನಡ್ಯೋಡಿ ಯುವಕ ಮಂಡಲದ ಕಲಾ ಮಂಟಪದಲ್ಲಿ ಶನಿವಾರ ನಡೆದ ಭಾ.ಕಿ.ಸಂ. ಮಾರ್ಪಾಡಿ-ಕಲ್ಲಬೆಟ್ಟು ಘಟಕದ ವಾರ್ಷಿಕೋತ್ಸವ ಹಾಗೂ ಪುರಸಭೆ ವ್ಯಾಪ್ತಿಯ ಕಿಸಾನ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕಿಸಾನ್ ಸಂಘದ ಹೋರಾಟದ ಫಲವಾಗಿ ಸರಕಾರ ಕೊನೆಗು ಮೀಸಲು ಅರಣ್ಯ ಜಾಗದ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕುಮ್ಕಿ ಹಕ್ಕಿನ ಬಗ್ಗೆಯು ಸಮಿತಿಯನ್ನು ರಚಿಸಿದೆ. ಸರಕಾರ ರೈತರ ಶೋಷಣೆಯನ್ನು ನಿಲ್ಲಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ರೈತರಿಗೆ ತೆರಿಗೆ ವಿಧಿಸುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು. 


ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ  ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಂಘಟನಾ ಕಾರ‍್ಯದರ್ಶಿ ನಾರಾಯಣ ಸ್ವಾಮಿ ವ್ಯಕ್ತಿ ಆಧಾರಿತ ಸಂಘಟನೆಯಿಂದ ರೈತರ ಪ್ರಗತಿ ಆಗುವುದಿಲ್ಲ. ದೇಶ ವ್ಯಾಪಿ ಹರಡಿರುವ ಭಾರತೀಯ ಕಿಸಾನ್ ಸಂಘ ರೈತರ ಹಿತಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದೆ. ದೇಶದಲ್ಲಿ ಇದುವರೆಗೆ ಸುಮಾರು ೬ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರನ್ನು ಸ್ವಾಭಿಮಾನದಿಂದ ಬದುಕಲು ಸರಕಾರ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು. ಲೀಟರ್ ಹಾಲಿಗೆ ಕನಿಷ್ಟ ೬೦ ರೂ ಬೆಲೆ ನಿಗದಿಪಡಿಸಿದರೆ ಹೈನುಗಾರಿಕೆ ಅಭಿವೃದ್ಧಿಯಾಗಬಹುದು ಎಂದರು. 

ಸನ್ಮಾನ:ಕೃಷಿ ಕ್ಷೇತ್ರದ ಸಾಧಕರಾದ ಪುಂಡರ್ಕ ಸಂಜೀವ ಪೂಜಾರಿ, ಕಟ್ಟೆಮನೆ ಶ್ರೀಧರ್ ಹೆಗ್ಡೆ, ಗುತ್ತುಮನೆ ಹಸನ್ ಸಾಹೇಬ್, ತೆಂಕಬೆಟ್ಟು ಕಮಲಾಕ್ಷಿ ಅವರನ್ನು ಸನ್ಮಾನಿಸಲಾಯಿತು. 

ಭಾ.ಕಿ.ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದಿರು. ಮೂಡುಬಿದಿರೆ ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕಿ ಸುಜಯ ಎ. ಜೈನ್, ಪುರಸಭೆ ಸದಸ್ಯೆ ಮಮತ ಆನಂದ್, ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ, ಕಿಸಾನ್ ಸಂಘದ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ಕೋಟೆಬಾಗಿಲು ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷ ರಾಜೇಶ್ ಕೋಟೆಗಾರ್, ನಡ್ಯೋಡಿ ದೈವಸ್ಥಾನದ ಅಧ್ಯಕ್ಷ ಆನಂದ ಕುಮಾರ್, ನಡ್ಯೋಡಿ ಯುವಕ ಮಂಡಲದ ಅಧ್ಯಕ್ಷ ಸತೀಶ್ ಪೂಜಾರಿ, ನಡ್ಯೋಡಿ ಶಾಲಾ ಸಲಹಾ ಸಮಿತಿ ಅಧ್ಯಕ್ಷ ಗಂಗಾಧರ ಬಂಗೇರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತೇಶ್, ನಡ್ಯೋಡಿ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಪಿ. ಶೆಟ್ಟಿ, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಮಸೀದಿ ಅಧ್ಯಕ್ಷ ಅಜೀದ್ ಉಪಸ್ಥಿತರಿದ್ದರು. ಪತ್ರಕರ್ತ ಪ್ರಸನ್ನ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

 ಘಟಕದ ಗೌರವ ಅಧ್ಯಕ್ಷ ಗಂಗಾಧರ ಬಂಗೇರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವರದಿ ವಾಚಿಸಿದರು. ಗೌರವ ಸಲಹೆಗಾರ ವಿಶ್ವನಾಥ ಕೋಟ್ಯಾನ್ ವಂದಿಸಿದರು.

Post a Comment

0 Comments