ಮೂಡುಬಿದಿರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವ್ಹೀಲ್ ಚೇರ್ ವಿತರಣೆ
ಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮೂಡುಬಿದಿರೆ ಇದರ ವತಿಯಿಂದ ಮೂಡುಬಿದಿರೆ ತಾಲೂಕಿನ ಲಾಡಿಯ ನಿವಾಸಿ ಅನಾರೋಗ್ಯ ಪೀಡಿತೆ ಗುಲಾಬಿ ಅವರಿಗೆ ವ್ಹೀಲ್ ಚೇರನ್ನು ವಿತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಶ್ರೀ ಡಾ.ವಿರೇಂದ್ರ ಹೆಗ್ಗಡೆ ಅವರ ವಿಶೇಷ ಕಾರ್ಯಕ್ರಮ 'ಜನಮಂಗಳ'ದಡಿಯಲ್ಲಿ ತಾಲೂಕಿನಲ್ಲಿ ಅಸೌಖ್ಯದಿಂದ ಬಳಲುತ್ತಿರುವ ಸುಮಾರು ಕಾರ್ಯಕ್ರಮದಡಿ ತಾಲೂಕಿನಲ್ಲಿ ತೀರಾ ಅಸೌಖ್ಯದಿಂದ ಬಳಲುತ್ತಿರುವ ಫಲಾನುಭವಿಗಳಿಗೆ ವಿವಿಧ ರೀತಿಯ 50 ಸಲಕರಣೆಗಳನ್ನು ಒದಗಿಸಲಾಗಿದ್ದು ಅದರಂತೆ ಮೂಡುಬಿದಿರೆಯ ಗುಲಾಬಿ ಅವರಿಗೆ ವ್ಹೀಲ್ ಚೇರನ್ನು ಒದಗಿಸಲಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಸುನೀತ, ಮೇಲ್ವೀಚಾರಕ ವಿಠಲ ಈ ಸಂದರ್ಭದಲ್ಲಿದ್ದರು.
.
0 Comments