ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸ್ಪಂದಿಸಿದ ನೇತಾಜಿ ಬ್ರಿಗೇಡ್ * ಕಂಬಳದಲ್ಲಿ ಸಂಗ್ರಹವಾದ ರೂ1,34,894 ಸಹಾಯಧನ ಹಸ್ತಾಂತರ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸ್ಪಂದಿಸಿದ ನೇತಾಜಿ ಬ್ರಿಗೇಡ್ 

   * ಕಂಬಳದಲ್ಲಿ ಸಂಗ್ರಹವಾದ ರೂ1,34,894 ಸಹಾಯಧನ ಹಸ್ತಾಂತರ


 


ಮೂಡುಬಿದಿರೆ : ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ವತಿಯಿಂದ ಮೂಡುಬಿದಿರೆಯ *"ಕೋಟಿ - ಚೆನ್ನಯ್ಯ"* ಜೋಡುಕರೆ ಕಂಬಳದಲ್ಲಿ ನಡೆದ 14ನೇ ಸೇವಾ ಯೋಜನೆಯಲ್ಲಿ ಸಂಗ್ರಹವಾದ ರೂ 1,34,894 ಧನವನ್ನು ಆಯ್ದ 5 ಮಂದಿ  ಫಲಾನುಭವಿಗಳಿಗೆ  ಸ್ವರಾಜ್ಯ ಮೈದಾನದ ಬಳಿ ಇರುವ ಶ್ರೀ ಆದಿಶಕ್ತಿ ಮಹಾಮ್ಮಾಯಿ ದೇವಸ್ಥಾನ ಮಾರಿಗುಡಿ ಬಳಿ ಶನಿವಾರ ಸಂಜೆ ಹಸ್ತಾಂತರಿಸಲಾಯಿತು.


ಕಣ್ಣಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಕಿನ್ನಿಗೋಳಿ ತಾಳಿಪಾಡಿಯ 6 ತಿಂಗಳ ಮಗು ಪೂಜಿತಾ ಶೆಟ್ಟಿಗಾರ್(ಪ್ರಾಯ: 6ತಿಂಗಳು)ಗೆ  1,00,894, 

 ಗಾಂಧಿ ನಗರದ ಕಡದಬೆಟ್ಟು ನಿವಾಸಿ ಹರಿಶ್ಚಂದ್ರ ಶೆಟ್ಟಿ ( ಪ್ರಾಯ 45) ಅವರಿಗೆ ಕಾಲಿನ ನರದ ಚಿಕಿತ್ಸೆಗಾಗಿ ರೂ.8500, 


 ಬ್ರೈನ್ ಸ್ಟ್ರೋಕ್ ಕಾಯಿಲೆಯಿಂದ ಬಳಲುತ್ತಿರುವ ಕಾರ್ಕಳದ ನಿಟ್ಟೆ ನಿವಾಸಿ ದಿನೇಶ್ (ಪ್ರಾಯ 39) ಅವರ ಚಿಕಿತ್ಸೆಗೆ ರೂ.8500,

  ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮೂಡುಬಿದಿರೆ ಒಂಟಿಕಟ್ಟೆ ನಿವಾಸಿ  ಮೋಹನ್ ದೇವಾಡಿಗ  (ಪ್ರಾಯ 55) ಮತ್ತು 


ಮೂಡುಬಿದಿರೆ  ಕೊಡಂಗಲ್ಲು ನಿವಾಸಿ  ಪದ್ಮಾವತಿ (ಪ್ರಾಯ 43)  ಚಿಕಿತ್ಸಾ ವೆಚ್ಚಕ್ಕಾಗಿ ತಲಾ  ರೂ 8500ರಂತೆ 17000 ಹೀಗೆ ಒಟ್ಟು 1,34,894/- ರೂಗಳನ್ನು ಕಂಬಳ ಸಮಿತಿ ಕಾರ್ಯದರ್ಶಿ, ಉದ್ಯಮಿ ರಂಜಿತ್ ಪೂಜಾರಿ, ಪುರಸಭಾ ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ಹಿರಿಯ ಸಾಹಿತಿಗಳಾದ ಶ್ರೀ ಸದಾನಂದ ನಾರಾವಿ, ಶ್ರೀ ಕ್ಷೇತ್ರ ಕೋಡಂಗಲ್ಲು ಅಯ್ಯಪ್ಪ ಕ್ಷೇತ್ರ ಗುರುಸ್ವಾಮಿಗಳಾದ ರಾಘು ಗುರುಸ್ವಾಮಿ, ಉದ್ಯಮಿ ರಾಜೇಶ್ ಮಲ್ಯ ಅವರು ಹಸ್ತಾಂತತರಿಸಿದರು.

 ನೇತಾಜಿ ಬ್ರಿಗೇಡ್ ನ  ಸಂಚಾಲಕ ರಾಹುಲ್ ಕುಲಾಲ್ ಪಧಾಧಿಕಾರಿಗಳು ಹಾಗೂ ಸದಸ್ಯರುಗಳು ಈ ಸಂದರ್ಭದಲ್ಲಿದ್ದರು.

Post a Comment

0 Comments

Advertisement