ವಿಶ್ವಕಪ್ ಟ್ರೋಪಿಯ ಚಿನ್ನದ ನಾಲ್ಕನೇ ಪ್ರತಿಕೃತಿ ತಯಾರಿಸಿದ ಸತೀಶ್ ಆಚಾರ್ಯ
ಮೂಡುಬಿದಿರೆ: ಭಾನುವಾರದಂದು (ಇಂದು)ನಡೆಯುವ ವಿಶ್ವಕಪ್ ಕ್ರಿಕೆಟ್ ಪೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿ ಎಂಬ ಆಶಯದೊಂದಿಗೆ ಇಲ್ಲಿನ ಕ್ರಿಕೆಟ್ ಅಭಿಮಾನಿಯೋರ್ವರು ವಿಶ್ವಕಪ್ ಟ್ರೋಪಿಯ ಪ್ರತಿಕೃತಿಯನ್ನು ಚಿನ್ನದಲ್ಲಿ ತಯಾರಿಸಿ ಗಮನಸೆಳೆದಿದ್ದಾರೆ.
ವೇಣೂರು ಕುಂಡದಬೆಟ್ಟು ರತ್ನ-ನಾರಾಯಣ ಆಚಾರ್ಯ ದಂಪತಿ ಪುತ್ರ ಸತೀಶ್ ಆಚಾರ್ಯ ಮೂಡುಬಿದಿರೆಯ ದೊಡ್ಮನೆ ರಸ್ತೆ ಬಳಿ ಅಕ್ಕಸಾಲಿಗ ಕೆಲಸ ಮಾಡಿಕೊಂಡಿದ್ದಾರೆ. ಕ್ರಿಕೆಟ್ ಅಭಿಮಾನಿಯಾಗಿದ್ದ ಇವರು ೨೦೦೭ರ ಟಿ-೨೦ ವಿಶ್ವಕಪ್ ವೇಳೆ ೧.೨೦೦ ಮಿ.ಗ್ರಾಂ ಬಂಗಾರದ ಮಾದರಿ ಟ್ರೋಪಿ, ೨೦೧೧ರ ವಿಶ್ವಕಪ್ ಕ್ರಿಕೆಟ್ ಟ್ರೋಪಿಯನ್ನು ೩ ಗ್ರಾಂ ಬೆಳ್ಳಿಯಲ್ಲಿ ಹಾಗೂ ೨೦೧೩ ರ ಚಾಂಪಿಯನ್ ಟ್ರೋಪಿಯ ಪ್ರತಿಕೃತಿಯನ್ನು ೫೦೦ ಮಿ.ಗ್ರಾಂ ಬಂಗಾರದಲ್ಲಿ ತಯಾರಿಸಿದ್ದಾರೆ. ೨೦೨೩ರ ವಿಶ್ವಕಪ್ ಟ್ರೋಪಿಯ ಮಾದರಿಯನ್ನು ಕಡಿಮೆ ಚಿನ್ನ ಬಳಕೆ ಮಾಡಿ ತಯಾರಿಸಿ ಇತಿಹಾಸ ಮಿರ್ನಿಸಬೇಕೆಂಬ ಆಸೆಯಿಂದ ಕೇವಲ ೫೦ ಮಿ.ಗ್ರಾಂ ಚಿನ್ನವನ್ನು ಮಾತ್ರ ಬಳಕೆ ಮಾಡಿರುತ್ತಾರೆ.
``೧ ಇಂಚು ೧ ಎಂ.ಎಂ ಉದ್ದದ ಟ್ರೋಪಿಯನ್ನು ತಯಾರಿಸಲು ೫೦ ಮಿ.ಗ್ರಾಂ ಬಂಗಾರವನ್ನು ಬಳಕೆ ಮಾಡಲಾಗಿದೆ. ತೆಳ್ಳಗಿನ ತಗಡಿಗೆ ಗಮ್ ಮೂಲಕ ಬಂಗಾರವನ್ನು ಪೇಸ್ಟ್ ಮಾಡಲಾಗಿದೆ. ಈ ಟ್ರೋಪಿಯನ್ನು ತಯಾರಿಸಲು ಅವರು ಅರ್ಧ ಗಂಟೆ ಸಮಯವನ್ನು ತೆಗೆದುಕೊಂಡಿದ್ದಾರೆ.
ನಾನು ಚಿಕ್ಕಂದಿನಿಂದಲು ಕ್ರಿಕೆಟ್ ಅಭಿಮಾನಿ. ಈ ಬಾರಿಯ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಗೆಲ್ಲಬೇಕು ಹಾಗೂ ಕಡಿಮೆ ಪ್ರಮಾಣದ ಚಿನ್ನ ಬಳಕೆ ಮಾಡಿ ವಿಶ್ವಕಪ್ ಟ್ರೋಪಿಯ ಚಿನ್ನದ ಮಾದರಿಯನ್ನು ತಯಾರಿಸಿ ಗಿನ್ನೆಸ್ ದಾಖಲೆ ಮಾಡಬೇಕೆಂಬುದು ನನ್ನ ಆಸೆ ಆಗಿದೆ'' ಎಂದು ಟ್ರೋಪಿ ತಯಾರಿಸಿದ ಸತೀಶ್ ಆಚಾರ್ಯ ಮಾಧ್ಯಮಕ್ಕೆ ತಿಳಿಸಿದರು.
0 Comments