ಮೂರನೇ ವರ್ಷವೂ ಗೋದಾನ ಮಾಡಿದ ಡಾ.ರವೀಂದ್ರ ಶೆಟ್ಟಿ
ಪ್ರತೀ ವರ್ಷ ದೀಪಾವಳಿಯ ದಿನದಂದು ಗೋದಾನ ಹಾಗೂ ಇನ್ನಿತರ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದ ಕರ್ನಾಟಕ ರಾಜ್ಯ ಕ್ವಾರಿ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಡಾ.ರವೀಂದ್ರ ಶೆಟ್ಟಿಯವರು ಈ ಬಾರಿಯೂ ಐದು ಉತ್ತಮ ತಳಿಯ ಗೋವುಗಳನ್ನು ದಾನ ಮಾಡಿ ಅರ್ಥಪೂರ್ಣ ದೀಪಾವಳಿ ಆಚರಣೆ ಮಾಡಿದ್ದಾರೆ.
ಕಾರ್ಕಳ ತಾಲೂಕಿನ ಅಶಕ್ತ ಕುಟುಂಬಗಳನ್ನು ಗುರುತಿಸಿ, ಹಸು ಕಳ್ಳತನವಾಗಿರುವ ಮನೆಗಳ ಮಾಹಿತಿ ಸಂಗ್ರಹಿಸಿ ಗೋವುಗಳ ಬಗ್ಗೆ ಕಾಳಜಿ, ಪ್ರಿತಿ ಇರುವ ಮನೆಯನ್ನು ಆರಿಸಿ ಉತ್ತಮ ತಳಿಯ ಹಸುಗಳನ್ನು ಮಾಳ, ಈದು, ಜೋಗಳ್ಬೆಟ್ಟು, ಕುಂಟಲ್ಪಾಡಿ, ನಂದಳಿಕೆಗೆ ತೆರಳಿ ಗೋ ದಾನ ಮಾಡಲಾಯಿತು.
ಅದಕ್ಕೂ ಪೂರ್ವ ರವೀಂದ್ರ ಶೆಟ್ಟಿ ಬಜಗೋಳಿಯವರ ಸ್ವ ಗೃಹದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು, ಗೋ ಸೇವೆ ಮಾಡುವ ಗೋ ಪಾಲಕರನ್ನು ಗೌರವಿಸಲಾಯಿತು.
ಮೂಡುಬಿದಿರೆ ಎಸ್.ಕೆ.ಎಫ್. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರಾಮಕೃಷ್ಣ ಆಚಾರ್,ಭಜರಂಗದಳದ ಮುಖಂಡ ಸುನಿಲ್ ಕೆ.ಆರ್., ವಾಗ್ಮಿ ಶ್ರೀಕಾಂತ್ ಶೆಟ್ಟಿ ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು.
0 Comments