ಮೂಡುಬಿದಿರೆ: ವಿದ್ಯಾರ್ಥಿ-ಉಪನ್ಯಾಸಕರ ಕಾರ್ಯಾಗಾರ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ವಿದ್ಯಾರ್ಥಿ-ಉಪನ್ಯಾಸಕರ ಕಾರ್ಯಾಗಾರ




ಮೂಡುಬಿದಿರೆ: ಸಮಚಿತ್ತ, ಅ ದಮ್ಯ ಒಲವು, ಅನ್ವೇಷಣಾ ಮನೋಭಾವ, ಸಮರ್ಪಕ ಸಂವಹನ ಸಾಮರ್ಥ್ಯ, ನಿರಂತರ ಕಲಿಕೆ, ಸೃಜನಶೀಲತೆ, ತಾಳ್ಮೆಯಿಂದ ಆಲಿಸುವಿಕೆ, ನಿತ್ಯ ಪೂರ್ವ ಸಿದ್ಧತೆ , ಸಹಾನುಭೂತಿಯ ನಾಯಕತ್ವ, ವಿಜ್ಞಾನ ವಿಶೇಷಗಳ ಪ್ರಾಥಮಿಕ ತಿಳುವಳಿಕೆಯನ್ನು ಅಧ್ಯಾಪಕನಾದವನು ಹೊಂದಿರಬೇಕೆಂದು ಡಾ.ನಾ ಸೋಮೇಶ್ವರ ಹೇಳಿದರು. 

ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ-ಉಪನ್ಯಾಸಕರ ಕಾರ್ಯಾಗಾರದಲ್ಲಿ ಉತ್ತಮ ಅಧ್ಯಾಪಕರಿಗೆ ಇರಬೇಕಾದ ಲಕ್ಷಣಗಳ ಕುರಿತು ಮಾತನಾಡಿದರು. 

ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಕುಮಾರ್ ಭಟ್, ಎಕ್ಸಲೆಂಟ್ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲೆ ದಿವ್ಯಾ ಬಾಳಿಗ, ಶಿಕ್ಷಕರು ಉಪಸ್ಥಿತರಿದ್ದರು. 

ಉಪನ್ಯಾಸಕ ರಂಜಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments