ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಜೊತೆ ಸಂವಾದ

ಜಾಹೀರಾತು/Advertisment
ಜಾಹೀರಾತು/Advertisment

 ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಜೊತೆ ಸಂವಾದ


ಮೂಡುಬಿದಿರೆ: ಯಶಸ್ವಿ ಟಿವಿ ವರದಿಗಾರರಾಗಲು ಮೂರು ಸಿ ಬಹುಮುಖ್ಯ. ವಿಷಯ (ಕಂಟೆAಟ್), ಸಂಪರ್ಕ (ಕಾನ್ಟಾö್ಯಕ್ಟ್÷್ಸ) ಹಾಗೂ ಸಂವಹನ (ಕಮ್ಯುನಿಕೇಷನ್)ದಿಂದ ಉತ್ತಮ ವರದಿ ನೀಡಬಹುದು ಎಂದು ಟಿವಿ ವರದಿಗಾರ ಪ್ರಕಾಶ್.ಡಿ ರಾಂಪುರ ತಿಳಿಸಿದರು. 

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ವೇದಿಕೆ ಶುಕ್ರವಾರ ಹಮ್ಮಿಕೊಂಡ ಹಿರಿಯ ವಿದ್ಯಾರ್ಥಿ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ರಕ್ಷಣಾ ಸಚಿವಾಲಯದಿಂದ ಅಧಿಕೃತವಾಗಿ ಯುದ್ಧ ವರದಿಗಾರಿಕೆಗೆ ತರಬೇತಿ ಪಡೆದ ಕುರಿತು ವಿವರಿಸಿದ ಅವರು, ಭಾರತೀಯ ರಕ್ಷಣಾ ಮಂತ್ರಾಲಯವು ಯುದ್ಧ ವರದಿಗಾರಿಕೆ ಸಂದರ್ಭದಲ್ಲಿ ಪಾಲಿಸಬೇಕಾದ ಕ್ರಮ ಹಾಗೂ ನಿಯಮಗಳ ಬಗ್ಗೆ ತರಬೇತಿ ನೀಡುತ್ತದೆ. ಸೇನೆಯ ಒಟ್ಟು ಚಿತ್ರಣ ಹಾಗೂ ಸುರಕ್ಷತೆ ಬಗೆಗೂ ತಿಳಿಸುತ್ತದೆ ಎಂದರು. 

ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಸಹ ಪ್ರಾಧ್ಯಾಪಕ ಡಾ.ಶ್ರೀನಿವಾಸ ಹೊಡೆಯಾಲ, ಸಹಾಯಕ ಪ್ರಾಧ್ಯಾಪಕರಾದ ಹರ್ಷವರ್ಧನ ಪಿ.ಆರ್., ನಿಶಾನ್ ಕೋಟ್ಯಾನ್ ಹಾಗೂ ದೀಕ್ಷಿತಾ ಜೇಡರಕೋಡಿ ಉಪಸ್ಥಿತರಿದ್ದರು.

Post a Comment

0 Comments