ಝೀ ಕನ್ನಡ ವೇದಿಕೆಯಲ್ಲಿ ಮೂಡುಬಿದಿರೆಯ ಗಾಯಕನ ಕಮಾಲ್

ಜಾಹೀರಾತು/Advertisment
ಜಾಹೀರಾತು/Advertisment

 ಯಶವಂತ್ ಹಾಡಿಗೆ ಅಪ್ಪು ಅಕ್ಕನ ಕಣ್ಣೀರು: ಸತತ ಮೂರನೇ ಬಾರಿ ಗೋಲ್ಡನ್ ಬಝ್ಝರ್:ಝೀ ಕನ್ನಡ ವೇದಿಕೆಯಲ್ಲಿ ಮೂಡುಬಿದಿರೆಯ ಗಾಯಕನ ಕಮಾಲ್




ದಕ್ಷಿಣ ಭಾರತದ ಖ್ಯಾತ ಸಂಗೀತ ಕಾರ್ಯಕ್ರಮ ಝೀ ಕನ್ನಡದ ಸರಿಗಮಪ ಸೀಸನ್-20 ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಯಶ್ವಂತ್ ಎಂ.ಜಿ.ರವರು ಸ್ಪರ್ಧಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಝೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಈ ಬಾರಿ ಅಪ್ಪು ಅಜರಾಮರ ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮದಲ್ಲಿ ಗಾಯಕ ವಿದ್ವಾನ್ ಯಶವಂತ ರವರು "ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ‌ ಹೇಳಿವೆ" ಎಂಬ ಹಾಡು ಹಾಡಿದ್ದರು.


ಈ ಹಾಡನ್ನು ಮೊದಲಿಗೆ ಹಾಡಿದವರು ವರನಟ ಡಾ.ರಾಜಕುಮಾರ್ ರವರು. ‌ನಂತರ ಪುನೀತ್ ರಾಜ್‍ಕುಮಾರ್ ಸಾವಿಗೂ ಕೆಲಕಾಲದ ಹಿಂದೆ ಈ ಹಾಡನ್ನು ಹಾಡಿದ್ದರು. ಯಶವಂತ ರವರು ಹಾಡುತ್ತಲೇ ಗ್ಯಾಲರಿಯಲ್ಲಿ ಕುಳಿತಿದ್ದ ಪುನೀತ್ ರಾಜ್‍ಕುಮಾರ್ ಸಹೋದರಿ ಲಕ್ಷ್ಮಿ ರಾಜ್‌ಕುಮಾರ್ ರವರು ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆಯಿತು. ನಂತರ ಈ ಹಾಡಿಗೂ ಪುನೀತ್ ರಾಜ್‍ಕುಮಾರ್‌ಗೂ ಇರುವ ನಂಟನ್ನು ವಿವರಿಸಿದರು.


ಯಶ್ವಂತ್ ಹಾಡಿಗೆ ಸತತ ಮೂರನೇ ಬಾರಿಯೂ ಗೋಲ್ಡನ್ ಬಝ್ಝರ್ ನೀಡಿದ ಸಂಗೀತ ನಿರ್ದೇಶನ ಹಂಸಲೇಕ "ನಿಮ್ಮ ಹಾಡಿನಲ್ಲಿ ಎಳ್ಳಷ್ಟೂ ದೋಷವಿಲ್ಲ. ಆ ಹಾಡಿಗೆ ಏನೂ ಹೇಳುವಂತಿಲ್ಲ. ಅದ್ಭುತವಾಗಿ ಹಾಡಿದ್ದೀರಿ" ಎಂದು ಹೊಗಳಿಕೆಯ ಸುರಿಮಳೆ ಗೈದರು.

Post a Comment

0 Comments