ಲಾಡಿ ಕೃಷ್ಣ ಶೆಟ್ಟಿ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದ ದುಷ್ಕರ್ಮಿಗಳು
ಮೂಡುಬಿದಿರೆ: ಮೂಡಬಿದಿರೆಯಿಂದ ಲಾಡಿ ನಾಗಬ್ರಹ್ಮ ದೇವಸ್ಥಾನಕ್ಕೆ ಹೋಗುವ ದಾರಿಗೆ ಅಳವಡಿಸಿರುವ ಯಕ್ಷಗಾನ ಕಲಾವಿದ ಲಾಡಿ ಕೃಷ್ಣ ಶೆಟ್ಟಿ ಹೆಸರಿರುವ ನಾಮಫಲಕಕ್ಕೆ ಯಾರೋ ದುಷ್ಕರ್ಮಿಗಳು ಕಪ್ಪು ಬಣ್ಣ ಬಳಿದಿರುವುದು ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಲಾಡಿ ಕೃಷ್ಣ ಶೆಟ್ಟಿ ಅವರು ಹೆಚ್ಚಿನ ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿ ಅದೇ ಗ್ರಾಮದ ಪ್ರಾಂತ್ಯ ಶಾಲೆಯಲ್ಲಿ ಮುಖ್ಯ ಅಧ್ಯಾಪಕರಾಗಿದ್ದರು ಮತ್ತು ಯಕ್ಷಗಾನ ಕಲಾವಿದರಾಗಿದ್ದರು. ವಿದ್ಯಾರ್ಥಿಗಳು ಮತ್ತು ಹಲವು ಜನರಿಗೆ ಯಕ್ಷಗಾನ ಕಲಿಸುತ್ತಿದ್ದರು.ಲಾಡಿ ಗ್ರಾಮದವರಾಗಿದ್ದ ಅವರು ನಾಗಬ್ರಹ್ಮ ದೇವಸ್ಥಾನದ ಟ್ರಸ್ಟಿ ಕೂಡಾ ಆಗಿದ್ದ ಅವರ ಹೆಸರನ್ನು ಲಾಡಿ ಗ್ರಾಮದಲ್ಲಿ ಶಾಶ್ವತವಾಗಿ ಇಡಬೇಕೆಂದು ಸುತ್ತಮುತ್ತಲಿನ ಜನರ ಅಪೇಕ್ಷೆಯಾಗಿತ್ತು. ಅದರಂತೆ 2017 ರಲ್ಲಿ ಪುರಸಭೆಯ ಪರವಾನಗಿ ಪಡೆದು ಮತ್ತು ಆ ಗ್ರಾಮದವರ ಅಪೇಕ್ಷೆಯ ಮೇರೆಗೆ *ಕೃಷ್ಣ ಶೆಟ್ಟಿ* ನಗರವೆಂದು ಬೋರ್ಡ್ ಹಾಕಿ ನಾಮಕರಣ ಮಾಡಲಾಗಿತ್ತು. ಆ ಸಮಯದಲ್ಲಿ ಹಾಕಿದ್ದ ಬೋರ್ಡ್ ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಹಾಳಾಗಿತ್ತು ಅದಕ್ಕಾಗಿ ಇತ್ತೀಚೆಗೆ ಆ ಗ್ರಾಮದ ಜನರು ಹೊಸ ನಾಮಫಲಕವನ್ನು ಅಳವಡಿಸಲಾಗಿತ್ತು.
ಇದೀಗ ಯಾರೋ ಕಿಡಿಗೇಡಿಗಳು ಅದಕ್ಕೆ ಕಪ್ಪು ಬಣ್ಣ ಬಳಿದಿದ್ದು ಆ ಗ್ರಾಮದ ಜನರಿಗೆ ತುಂಬಾ ನೋವನ್ನುಂಟು ಮಾಡಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.ಕಪ್ಪು ಬಣ್ಣ ಬಳಿದು ಹೀನ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಆದಷ್ಟು ಬೇಗ ಬಂಧಿಸುವ ಭರವಸೆ ನೀಡಿದ್ದಾರೆ .
0 Comments