ಜನಾಆಶಾ ಸೌತ್ ನಿಧಿ ಲಿಮಿಟೆಡ್ ನ ಮೂಡುಬಿದಿರೆ ಕಛೇರಿ ಉದ್ಘಾಟನೆ
ಮೂಡುಬಿದಿರೆ: ಜನಾಆಶಾ ಸೌತ್ ನಿಧಿ ಲಿಮಿಟೆಡ್ ನ ಮೂಡುಬಿದಿರೆ ಶಾಖೆಯು ಹಳೆ ಪುರಸಭೆ ಬಳಿಯ ವಿಶಾಲ್ ಬಿಸ್ನೆಸ್ ಸೆಂಟರ್ ನಲ್ಲಿ ಭಾನುವಾರ ಆರಂಭಗೊಂಡಿತು.
ಗ್ರೂಫ್ ನಿರ್ದೇಶಕ ಗಿರೀಶ್ ಅಲೂರು ಅಧ್ಯಕ್ಷತೆಯನ್ನು ವಹಿಸಿ ಉದ್ಘಾಟಿಸಿ ಮಾತನಾಡಿ ದ.ಕ.ಜಿಲ್ಲೆಯಲ್ಲಿ ಈ ಬ್ಯಾಂಕ್ ನ ಶಾಖೆ ಎರಡನೇಯದಾಗಿದ್ದು ಮೊದಲ ಬ್ರಾಂಚ್ ಪುತ್ತೂರಿನಲ್ಲಿದೆ. ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಬೇಕೆಂಬ ಉದ್ದೇಶದಿಂದ ಇಲ್ಲಿ ಶಾಖೆಯನ್ನು ಆರಂಭಿಸಲಾಗಿದೆ. ಲೋನ್ ಕೊಡುವುದರಿಂದ ಬ್ಯಾಂಕ್ ಗಳು ಬೆಳೆಯುತ್ತವೆ ಈ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಬ್ಯಾಂಕ್ ಗಳನ್ನು ತೆರೆಯುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಮುಂದಿನ ದಿನಗಳಲ್ಲಿ ಎಟಿಎಂ ಸೇವೆಯನ್ನೂ ಆರಂಭಿಸಲಾಗುವುದು ಎಂದ ಅವರು ಜನರ ಜತೆ ಹೊಂದಾಣಿಕೆಯಿಂದಿರಿ, ಸುಳ್ಳು ಹೇಳಬೇಡಿ ನಂಬಿಕೆಯನ್ನು ಉಳಿಸಿಕೊಳ್ಳಿ ಎಂದು ಸಿಬಂದಿಗಳಿಗೆ ಕಿವಿ ಮಾತು ಹೇಳಿದರು.
ರಿಜಿನಲ್ ಮ್ಯಾನೇಜರ್ ಎಸ್.ಶಿವಣ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜ್ಯೋತಿ ಬಸರಗಿ, ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು, ಬಾಲಕೃಷ್ಣ ಗೌಡ, ಚೆಲುವ ಕೃಷ್ಣಮೂರ್ತಿ ಡಿ., ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ಷೇತ್ರ ಅಧಿಕಾರಿಗಳಾದ ಜೋಸೆಫ್ ಸಿ., ಉಮೇಶ್ ನಾಯ್ಕ್, ನವೀನ್, ತಾರಾ, ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.
ಗ್ರೂಫ್ ನಿರ್ದೇಶಕರಾದ ಗಿರೀಶ್ ಆಲೂರ್ ಅವರನ್ನು ಹಾಗೂ ಮುಖ್ಯ ಅತಿಥಿಗಳನ್ನು ಮೂಡುಬಿದಿರೆ ಶಾಖೆಯ ವತಿಯಿಂದ ಗೌರವಿಸಲಾಯಿತು.
ಮೂಡುಬಿದಿರೆ ಶಾಖೆಯ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಗೌಡ ಸ್ವಾಗತಿಸಿದರು. ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನಿ ಆನಂದ್ ಕಾರ್ಯಕ್ರಮ ನಿರೂಪಿಸಿದರು. ರಂಜಿತಾ ವಂದಿಸಿದರು.
0 Comments