ಎಕ್ಸಲೆಂಟ್ ಎನ್‌ಎಸ್‌ಎಸ್ ಶಿಬಿರ ಸಮಾಪನ
ಮೂಡುಬಿದಿರೆ: ತಾಳ್ಮೆ ಹಾಗೂ ಶಿಸ್ತಿನ ಜೀವನ ಮನುಷ್ಯನ ಜೀವನದಲ್ಲಿ ಅಗತ್ಯ. ಸ್ವಚ್ಛ ಮನಸ್ಸು, ಸ್ವಚ್ಛ ಪರಿಸರ ವ್ಯಕ್ತಿಯ ಹಾಗೂ ದೇಶದ ಪ್ರಗತಿಗೆ ಅನಿವಾರ್ಯ. ಎಂದು ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು.
ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಸಮಾರೋಪ ಭಾಷಣ ಮಾಡಿದರು.
ಗಂಟಾಲಕಟ್ಟೆ ನಿತ್ಯಸಹಾಯ ಮಾತೆ ಚರ್ಚ್ನ ಪ್ರಧಾನ ಧರ್ಮಗುರು ರೊನಾಲ್ಡ್ ಡಿಸೋಜ ಮಾತನಾಡಿ, ಬದ್ಧತೆ, ಶ್ರದ್ಧೆ, ಸಮಾಜಪ್ರೀತಿ, ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಪ್ರತಿಯೋರ್ವನು ಗಳಿಸಬಹುದಾದ ಸಂದೇಶಗಳು. ಸಿಕ್ಕ ಅವಕಾಶಗಳನ್ನು ಧನಾತ್ಮಕವಾಗಿ ಬಳಸಿಕೊಂಡು ನಮ್ಮ ಸೃಜನಶೀಲತೆಯ ಮೂಲಕ, ಸುಪ್ತ ಪ್ರತಿಭೆಯ ಮೂಲಕ ಬೆಳೆಸುವುದೇ ಈ ಶಿಬಿರ ಉದ್ದೇಶ., ನೀವು ಪಡೆದ ಲಾಭಗಳು ಎಂದು ಹೇಳಿದರು.
ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಉಪಪ್ರಾಂಶುಪಾಲಮನೋಜ್‌ಕುಮಾರ್, ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್ ಉಪಪ್ರಾಂಶುಪಾಲೆ ವಿಮಲಾ ಶೆಟ್ಟಿ, ಕರಿಂಜೆ ನಾಗಬ್ರಹ್ಮ ರಕ್ತೇಶ್ವರಿ ಸೇವಾಟ್ರಸ್ಟ್ ಕಾರ್ಯದರ್ಶಿ ಶಶಿಧರ್ ಶೆಟ್ಟಿ, ಎಕ್ಸಲೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಬಿ.ಪಿ ಸಂಪತ್ ಕುಮಾರ್ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಅಪೇಕ್ಷಾ, ಅಶ್ವಿನ್, ಚಂದ್ರಶೇಖರ್, ವಿಮರ್ಶಾ ಜೈನ್, ಸಿಂಚನಾ, ಅಭಿಪ್ರಾಯ ತಿಳಿಸಿದರು.
ನಾಯಕತ್ವ ಗುಣಗಳಿಗೆ ಕೊಡುವ ವಿಶೇಷ ಬಹುಮಾನಗಳನ್ನು ಕೊಡುವ ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಪ್ರದೀಪ್ ಕೆ.ಪಿ ನಡೆಸಿಕೊಟ್ಟರು. ವಾಣಿಜ್ಯ ವಿಭಾಗ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಸಂಧ್ಯಾಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿ ತೇಜಸ್ವೀ ಭಟ್ ವಂದಿಸಿದರು.
0 Comments