ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ಗೆ ಜಿಲ್ಲಾಧ್ಯಕ್ಷರ ಭೇಟಿ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ಗೆ ಜಿಲ್ಲಾಧ್ಯಕ್ಷರ ಭೇಟಿ



ಮೂಡುಬಿದಿರೆ ಇನ್ನರ್‌ವೀಲ್ ಕ್ಲಬ್‌ಗೆ ಜಿಲ್ಲಾ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಸೋಮವಾರ ನಡೆಯಿತು.

ಮೂಡುಬಿದಿರೆಯ ರೋಟರಿ ಶಿಕ್ಷಣ ಸಂಸ್ಥೆಗಳ ಸಮ್ಮಿಲನ ಹಾಲ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷೆ ಪೂರ್ಣಿಮಾ ರವಿ ಭಾಗವಹಿಸಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.



ನಂತರ ಮಾತನಾಡಿದ ಅವರು ಕ್ರೀಯಾಶೀಲ ಕ್ಲಬ್‌ಗಳಲ್ಲಿ ಒಂದಾಗಿರುವ ಮೂಡುಬಿದಿರೆಯ ಇನ್ನರ್‌ವೀಲ್ ಕಡಿಮೆ ಅವಧಿಯಲ್ಲಿ 83ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಿ ಅಭಿನಂದನೆಗೆ ಪಾತ್ರವಾಗಿದೆ ಎಂದರು. ಕಳೆದು ಹೋದ ದಿನಗಳಿಗಿಂತ ಇಂದಿನ ದಿನವನ್ನು ಉತ್ತಮಗೊಳಿಸುವುದು ಮಾನವೀಯ ಸಂಬಂಧವನ್ನು ಬೆಳೆಸುವುದು ಕ್ಲಬ್‌ನ ಆದ್ಯತೆ ಎಂದರು.

ಜಿಲ್ಲಾ ಖಜಾಂಚಿ ರಜನಿ ಭಟ್, ಮೂಡುಬಿದಿರೆ ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಸರಿತಾ ಆಶೀರ್ವಾದ್, ಕಾರ್ಯದರ್ಶಿ ಪೂರ್ಣಿಮಾ ದಾಮೋದರ್ ವೇದಿಕೆಯಲ್ಲಿದ್ದರು.

ಸೇವಾ ಚಟುವಟಿಕೆಯ ಭಾಗವಾಗಿ ಮೂಡುಬಿದಿರೆಯ ಅರಮನೆಬಾಗಿಲಿನಲ್ಲಿರುವ  ಸ್ಪೂರ್ತಿ ವಿಶೇಷ  ಮಕ್ಕಳ  ಶಾಲೆಗೆ ರೂ. 25ಸಾವಿರ ದೇಣಿಗೆ, ಸುಕನ್ಯಾ ವಾಲ್ಪಾಡಿಯವರಿಗೆ ಹೊಲಿಗೆ ಯಂತ್ರ, ಗಿರಿಜಾರಿಗೆ ಶ್ರವಣ ಸಾಧನ, ನಡ್ಯೋಡಿ ಶಾಲಾ ಮಕ್ಕಳಿಗೆ ಯೂನಿಫಾರ್ಮ್, ವಿದ್ಯಾರ್ಥಿನಿ ಭೂಮಿಕಾಳಿಗೆ ರೂ. 10 ಸಾವಿರ ವಿದ್ಯಾ ಸಹಾಯಧನ, ರೋಟರಿ ಶಿಕ್ಷಣ ಸಂಸ್ಥೆಗಳ ಕಾವಲುಗಾರ ಬಹದ್ದೂರುಗೆ ಮದ್ದಿನ ನೆರವು, ಬಿಆರ್‌ಪಿ ಪ್ರೌಢಶಾಲೆಗೆ ಮೈಕ್ ಸೆಟ್, ಶೇಖರ್ ವಾರಿಜಾ ದಂಪತಿ ಮನೆಗೆ ಶೌಚಾಲಯಕ್ಕೆ ಸಹಾಯಧನ, ಇದಂ ರೀ ಹ್ಯಾಬಿಲಿಟೇಶನ್ ಶಾಲಾ ಅಟೋಟ ಉಪಕರಣಕ್ಕಾಗಿ ರೂ. 40ಸಾವಿರ ಸಹಾಯಧನ ನೀಡಲಾಯಿತು.

ಅದೃಷ್ಟವಂತ ರೋಟರಿ ಸದಸ್ಯರಾದ ಡಾ. ವಿನಯ ಕುಮಾರ್ ಹೆಗ್ಡೆ, ಡಾ. ನಿವೇದಿತಾ, ಶುಭಧರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಇದಂ ರೀ ಹ್ಯಾಬಿಲಿಟೇಶನ್‌ನ ಸ್ಥಾಪಕಿ ಅಮೃತಾ ಅನೀಶ್‌ರನ್ನು ಅವರ ಸಾಧನೆಗಾಗಿ ಗುರುತಿಸಿ ಸನ್ಮಾನಿಸಲಾಯಿತು.

ಇನ್ನರ್ ವೀಲ್ ಕ್ಲಬ್‌ನ ಸಂಚಿಕೆಯನ್ನು ರೋಟರಿ ಕ್ಲಬ್‌ನ ಅಧ್ಯಕ್ಷ ನಾಗರಾಜ್‌ ಅವರಿಗೆ ಸಂಚಿಕೆಯ ಸಂಪಾದಕಿ  ಥರಿನಾ ಪಿಂಟೋ ಹಸ್ತಾಂತರಿಸಿ ಬಿಡುಗಡೆಗೊಳಿಸಲಾಯಿತು.

ಅಪೇಕ್ಷಾ ಜೈನ್ ಪ್ರಾರ್ಥನೆಗೈದರು. ಶ್ವೇತಾ ಇನ್ನರ್‌ವೀಲ್ ಧ್ಯೇಯ ಪಠಿಸಿದರು. ಸರಿತಾ ಆಶೀರ್ವಾದ್ ಸ್ವಾಗತಿಸಿದರು. ಪೂರ್ಣಿಮಾ ದಾಮೋದರ್ ವರದಿ ಮಂಡಿಸಿದರು. ಸುಚೇತಾ ಕೋಟ್ಯಾನ್ ಜಿಲ್ಲಾಧ್ಯಕ್ಷರನ್ನು ಪರಿಚಯಿಸಿದರು. ನಿಶ್ಮಿತಾ ನಾಗರಾಜ್ ಸಾಧಕ ಮಹಿಳೆಯರ ಪರಿಚಯಿಸಿದರು. ಪ್ರಕಾಶಿನಿ ಹೆಗ್ಡೆ ಸೇವಾ ಚಟುವಟಿಕೆಗಳ ವಿವರ ಮಂಡಿಸಿದರು. ಬಿಂದಿಯ ಎಸ್. ಶೆಟ್ಟಿ ಧನ್ಯವಾದವಿತ್ತರು. ಶಾಲಿನಿ ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಕ್ಲಬ್‌ನ ಸದಸ್ಯರಿಂದ ವೈವಿಧ್ಯಮಯ ಕಾರ್ಯಕ್ರಮ ಜರುಗಿತು.

Post a Comment

0 Comments