ಬೆಳುವಾಯಿ: ಅಂಡರ್ ಪಾಸ್ ರದ್ದಿಗೆ ಆಗ್ರಹಿಸಿ ಪ್ರತಿಭಟನೆ
ಮೂಡುಬಿದಿರೆ: ಬೆಳುವಾಯಿ ಪೇಟೆ ಉಳಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಅಂಡರ್‌ಪಾಸ್ ರದ್ದಿಗೆ ಆಗ್ರಹಿಸಿ ನಡೆದ ಮಂಗಳವಾರ ಬೆಳುವಾಯಿ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು. ಬೆಳುವಾಯಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಹಾದುಹೋಗುತ್ತಿದ್ದು ಪೇಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಡರ್‌ಪಾಸ್ ವ್ಯವಸ್ಥೆಯಿಂದಾಗಿ ಪೇಟೆಯ ಸ್ಥಳವು ಇಕ್ಕಟ್ಟಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಉದ್ಯಮಿ ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ನಿರ್ಮಾಣದಿಂದಾಗಿ ಪೇಟೆ ಸಂಪೂರ್ಣವಾಗಿ ಮುಚ್ಚಿಹೋಗುತ್ತಿದ್ದು ಪೇಟೆಯ ಉಳಿವಿಗಾಗಿ ಈ ಹೋರಾಟ ನಡೆಯಲಿದೆ. ಈಗಾಗಲೇ ಸಂಸದರು, ಶಾಸಕರ ಗಮನಕ್ಕೆ ಈ ವಿಷಯ ತರಲಾಗಿದ್ದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಪಂಚಾಯತ್ ಅಧ್ಯಕ್ಷ ಸುರೇಶ್ ಗೋಳಾರ, ಸದಸ್ಯರುಗಳು, ಉದ್ಯಮಿ ದೇವಾನಂದ್ ಭಟ್, ಅಚ್ಯುತ ಶೆಟ್ಟಿ, ಜಯರಾಮ್ ಪೂಜಾರಿ, ಪಂಚಾಯತ್ ಮಾಜಿ ಅಧ್ಯಕ್ಷ ಭಾಸ್ಕರ ಆಚಾರ್ಯ, ರತ್ನಾಕರ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
0 Comments