ಕಾರ್ಕಳ ತಾಲೂಕು ಹೊಸ್ಮರ್ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕಾರ್ಕಳ.ಹಾಸ್ಮರು ಮೂಕಾಂಬಿಕಾ ಯುವಕ ಸಂಘ (ರಿ )ಈದು.ಬ್ರಾಮರಿ ಕುಣಿತ ಭಜನಾ ಮಂಡಳಿ ಹೊಸ್ಮರ್. ಪ್ರಗತಿ ಬಂಧು ಜ್ಞಾನ ವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟ ಹೊಸ್ಮರ್.ವಲಯ ಇವರ ಸಹಯೋಗ ದೊಂದಿಗೆ ಪರಮ ಪೂಜ್ಯ ರಾಜಶ್ರೀ ಡಾ ಡಿ ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಡಾ ಹೇಮಾವತಿ ವಿ ಹೆಗ್ಗಡೆಯವರ ಆಶೀರ್ವಾದ ಗಳೊಂದಿಗೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಗಣೇಶ್ ಕಾಂಪ್ಲೆಕ್ಸ್ ಹೊಸ್ಮರ್ ನಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದಾನಂದ ಪೂಜಾರಿ ಅಧ್ಯಕ್ಷರು ಗ್ರಾಮ ಪಂಚಾಯತ್ ಈದು ಇವರು ವಹಿಸಿದ್ದರು.
ಪುಂಡಲೀಕ ಪ್ರಭು ಮಾಲೀಕರು ಗಣೇಶ್ ಕಾಂಪ್ಲೆಕ್ಸ್ ಹೊಸ್ಮರ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಾ ನಾಗರಾಜ್ ಎಸ್ ವೈದ್ಯಕೀಯ ಅಧೀಕ್ಷರರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಕುತ್ಪಾಡಿ ಉದ್ಯಾವರ, ಡಾ ಪ್ರಸಾದ್ ಬೀ ಶೆಟ್ಟಿ ವಿಜಯ ಕ್ಲಿನಿಕ್ ಹೊಸ್ಮರ್ , ದಿನೇಶ್ ಅಧ್ಯಕ್ಷರು ಬ್ರಮರಿ ಭಜನಾ ಮಂಡಳಿ ಹೊಸ್ಮಾರು . ಯೋಗೀಶ್ ಅಧ್ಯಕ್ಷರು ಮೂಕಾಂಬಿಕಾ ಯುವಕ ಮಂಡಳಿ (ರಿ )ಈದು, ಅಶೋಕ್ ವಲಯಾಧ್ಯಕ್ಷರು. ನಾರಾಯಣ ಪೂಜಾರಿ ಎಂ ಕೆ .ತಾಲೂಕು ಜನ ಜಾಗೃತಿ ಸದಸ್ಯರು ಇವರುಗಳು ಕಾರ್ಯಕ್ರಮ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಹೊಸ್ಮರು ವಲಯ ಮೇಲ್ವಿಚಾರಕರಾದ ಮನೋಜ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ನಿರೂಪಿಸಿದರು. ಸೇವಾ ಪ್ರತಿನಿಧಿ ಸ್ವಾತಿ ಧನ್ಯವಾದ ಮಾಡಿದರು.ಕಾರ್ಯಕ್ರಮದಲ್ಲಿ ಹೊಸ್ಮರ್ ವಲಯದ ಎಲ್ಲಾ ಸೇವಾ ಪ್ರತಿನಿಧಿ ಯವರೂ ಒಕ್ಕೂಟದ ಅಧ್ಯಕ್ಷರುಗಳು ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದು ಈ ಕಾರ್ಯಕ್ರಮ ಪ್ರಯೋಜನವನ್ನು 169ಹಿರಿಯರು 150 ವಿಧ್ಯಾರ್ಥಿ ಗಳು ಭಾಗವಹಿಸಿ ತಪಾಸಣೆ ಮಾಡಿಕೊಂಡರು.
0 Comments