9 ನೇ ವರ್ಷದ "ಕೃಷಿ ಖುಷಿ", ವನಮಹೋತ್ಸವ, ಸಾಧಕ ಯುವ ಕೃಷಿಕರಿಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 9 ನೇ ವರ್ಷದ "ಕೃಷಿ ಖುಷಿ", ವನಮಹೋತ್ಸವ, ಸಾಧಕ ಯುವ ಕೃಷಿಕರಿಗೆ ಸನ್ಮಾನ 



ಮೂಡುಬಿದಿರೆ: ಎಂಸಿಎಸ್ ಬ್ಯಾಂಕಿನ ಸಹಯೋಗದಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರದ ವತಿಯಿಂದ 9ನೇ ವರ್ಷದ "ಕೃಷಿ ಖುಷಿ", ವನಮಹೋತ್ಸವ ಹಾಗೂ ಸಾಧಕ ಯುವ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮವು ಎಂಸಿಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಶನಿವಾರ ನಡೆಯಿತು.



   ಸಾಮಾಜಿಕ ಆರಣ್ಯ ವಿಭಾಗದ ಮಂಗಳೂರು ವಲಯಾರಣ್ಯಾಧಿಕಾರಿ ಕಿರಣ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಿಶ್ರ ಬೆಳೆಯ ಮಹತ್ವ ಮತ್ತು ಕೃಷಿಕರಿಗೆ ಅರಣ್ಯ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.



ನಿವೃತ್ತ ಪ್ರಾಂಶುಪಾಲ, ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷ ಗುಣಪಾಲ ಕಡಂಬ ದಿಕ್ಸೂಚಿ ಭಾಷಣ ಮಾಡಿ  ಕೃಷಿಯಿಂದ ನಮಗೆ ಶುದ್ಧ ಗಾಳಿ, ನೀರಿನೊಂದಿಗೆ  ನೆಮ್ಮದಿ ದೊರೆಯುತ್ತದೆ. ನೀರಿನ ಮೂಲಗಳನ್ನು ಕಾಪಾಡಿಕೊಳ್ಳುವುದರ ಜತೆಗೆ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಕ್ರಮವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. 

ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.


  ಸನ್ಮಾನ : ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸುಭಾಶ್ಚಂದ್ರ ಚೌಟ, ಮೆಲ್ವಿನ್ ಹೆಲೆನ್ ಮಿರಾಂದ, ಯಶೋಧ ಪ್ರಭಾಕರ, ಮಹಾಬಲ ಶೆಟ್ಟಿ, ದಯಾನಂದ ಕೋಟ್ಯಾನ್ ಮತ್ತು ಗ್ರೆಗರಿ ಲೋಬೋ ಅವರನ್ನು ಸನ್ಮಾನಿಸಲಾಯಿತು. 


ಆಕಾಶವಾಣಿಯ ಸೂರ್ಯ ನಾರಾಯಣ ರಾವ್, ಬ್ಯಾಂಕಿನ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ ಎಂ,  ಹಿರಿಯ ಕೃಷಿಕ ಪಿ.ಕೆ.ರಾಜು ಪೂಜಾರಿ ಅತಿಥಿಗಳಾಗಿ ಭಾಗವಹಿಸಿದ್ದರು.   ಕಾರ್ಯದರ್ಶಿ ಅಭಯಕುಮಾರ್ ಉಪಸ್ಥಿತರಿದ್ದರು. ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಗುಣಪಾಲ ಮುದ್ಯ ಸ್ವಾಗತಿಸಿದರು.

ನವೀನ್ ಕಾರ್ಯಕ್ರಮ ನಿರೂಪಿಸಿದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಧರಣೇಂದ್ರ ಕುಮಾರ್ ವಂದಿಸಿದರು.

Post a Comment

0 Comments