ಮೂಡುಬಿದಿರೆ ರೋಟರಿ ಕ್ಲಬ್ ನಿಂದ ಪಾಲಡ್ಕದಲ್ಲಿ "ಕೆಸರ್ದ ಪರ್ಬ"
ಮೂಡುಬಿದಿರೆ : ಇಲ್ಲಿನ ರೋಟರಿ ಕ್ಲಬ್ ಆಶ್ರಯದಲ್ಲಿ ಭಾನುವಾರ ಪಾಲಡ್ಕದ ಬಿ.ಟಿ.ರೋಡಿನಲ್ಲಿ ಕೆಸರ್ ದ ಗದ್ದೆ ಕ್ರೀಡಾಕೂಟ "ಕೆಸರ್ದ್ ಪರ್ಬ" ಕಾರ್ಯಕ್ರಮದಲ್ಲಿ ರೋಟರಿಯ ಹಿರಿಯ ಸದಸ್ಯರು, ಇನ್ನರ್ ವ್ಹೀಲ್ ಕ್ಲಬ್ ನ ಸದಸ್ಯರು ಗದ್ದೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ವಿಶೇಷವಾಗಿ ಗಮನ ಸೆಳೆದರು.
ರೋಟರಿ ಕ್ಲಬ್ ನ ಅಧ್ಯಕ್ಷ ನಾಗರಾಜ್ ಬಿ.ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿ ರಾಜ್ಯ 'ಕ್ರೀಡಾ ರತ್ನ' ಪ್ರಶಸ್ತಿ ಪುರಸ್ಕೃತ ಕಂಬಳದ ಮಿಂಚಿನ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಮತ್ತು ಸದಸ್ಯರು ಭತ್ತವನ್ನು ಮರಾಯಿಗೆ ಸುರಿಯುವ ಮೂಲಕ ಚಾಲನೆಯನ್ನು ನೀಡಿದರು.
ನಂತರ ಮಾತನಾಡಿದ ಶ್ರೀನಿವಾಸ ಗೌಡ ಅವರು ರೋಟರಿ ಸದಸ್ಯರು ಒಂದು ಕುಟುಂಬ ಇದ್ದಂತೆ ನಿಮ್ಮಲ್ಲಿ ಆತ್ಮೀಯತೆ, ಖುಷಿ ಇದೆ. ಕೆಸರ್ ದ ಪರ್ಬ ಮುಂತಾದ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನೂರು ವರ್ಷಗಳ ಕಾಲ ಮಾಡುವಂತ್ತಾಗಲಿ ಎಂದು ಶುಭ ಹಾರೈಸಿದರು.
ಸನ್ಮಾನ : ಕಂಬಳ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾಕೂಟಕ್ಕೆ ಗದ್ದೆಯನ್ನು ಒದಗಿಸಿರುವ ಪೀಟರ್ ಡಿ'ಸೋಜಾ ದಂಪತಿ ಮತ್ತು ಸಹಕರಿಸಿರುವ ರೋಟರಿ ಕ್ಲಬ್ ನ ಮಾಜಿ ಕಾರ್ಯದರ್ಶಿ ಅವಿಲ್ ಡಿ'ಸೋಜಾ ಅವರನ್ನು ಗೌರವಿಸಲಾಯಿತು.
ಕ್ರೀಡಾಕೂಟಕ್ಕಾಗಿ ಮಾಡಿರುವ ನಾಲ್ಕು ತಂಡಗಳ ಮುಖ್ಯಸ್ಥರು, ರೋಟರಿ ಕ್ಲಬ್ ನ ಸದಸ್ಯರಾದ ರಾಮಚಂದ್ರ ಮಿಜಾರು, ಡಾ.ಮುರಳೀಕೃಷ್ಣ, ಶ್ರೀಕಾಂತ್ ಕಾಮತ್, ಡಾ.ಆಶೀರ್ವಾದ್, ರೋಟರಿ ಕ್ಲಬ್ ಸದಸ್ಯ ಸಂತೋಷ್ ಕುಮಾರ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸರಿತಾ ಆಶೀರ್ವಾದ್, ಉಪಸ್ಥಿತರಿದ್ದರು.
ಗದ್ದೆಯಲ್ಲಿ ನಿಧಿ ಶೋಧ, ಓಟ, ನಾಯಿ ಮತ್ತು ಎಲುಬು, ಮಡಕೆ ಒಡೆಯುವುದು, ಹಲಗೆ ಎಳೆಯುವುದು, ಹಗ್ಗ-ಜಗ್ಗಾಟ ಮುಂತಾದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಕ್ಲಬ್ ನ ಸದಸ್ಯರು ಕೆಸರಿನಲ್ಲಿ ಕಾಲ ಕಳೆಯುವ ಮೂಲಕ ಖುಷಿ ಹಂಚಿಕೊಂಡರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
0 Comments