ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೂಡಬಿದರೆ ತಾಲೂಕಿನ ಮೊಸರು ಕುಡಿಕೆ ಉತ್ಸವಗಳು

ಜಾಹೀರಾತು/Advertisment
ಜಾಹೀರಾತು/Advertisment

 ಸೆ.7 ರಂದು ಅಶ್ವತ್ಥಪುರ ಮತ್ತು ಕಲ್ಲಬೆಟ್ಟುವಿನಲ್ಲಿ ಮೊಸರು ಕುಡಿಕೆ ಉತ್ಸವ 



ಮೂಡುಬಿದಿರೆ: ಶ್ರೀ ಕೃಷ್ಣ ಫ್ರೆಂಡ್ಸ್ ಟ್ರಸ್ಟ್ (ರಿ) ಕಡ್ಪಲಗುರಿ ಅಶ್ವತ್ಥಪುರ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 30ನೇ ವರ್ಷದ ಮೊಸರು ಕುಡಿಕೆ ಉತ್ಸವು ನಡೆಯಲಿದೆ. 

ಮಧ್ಯಾಹ್ನ 1.00 ಗಂಟೆಗೆ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿದ್ದು, 1.30 ಕ್ಕೆ ಮುದ್ದುಕೃಷ್ಣ, 2.00 ಗಂಟೆಗೆ ಬಾಲಕೃಷ್ಣ ಸ್ಪರ್ಧೆ ನಂತರ ವಿವಿಧ ಆಟೋಟ ಸ್ಪರ್ಧೆಗಳು, ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಲಿಂಗಪ್ಪ ಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

---------------

ಕಲ್ಲಬೆಟ್ಟುವಿನಲ್ಲಿ ಮೊಸರು ಕುಡಿಕೆ ಉತ್ಸವ


ಮೂಡುಬಿದಿರೆ: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಕಲ್ಲಬೆಟ್ಟುವಿನ ಗೋವುಗುಡ್ಡೆಯ ಸತ್ಯನಾರಾಯಣ ಕಟ್ಟೆಯ ಆವರಣದಲ್ಲಿ ಹಿಂದೂ ಯುವಕ ಮಂಡಲದ ವತಿಯಿಂದ 18 ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ಮುದ್ದು ಕೃಷ್ಣ ಸ್ಪರ್ಧೆ ನಡೆಯಲಿದೆ.

 ಮುದ್ದು ಕೃಷ್ಣ ಸ್ಪರ್ಧೆಯು ಬೆಳಿಗ್ಗೆ 9.00 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 1.00 ಗಂಟೆಗೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು  ಸಂಘಟಕರು ತಿಳಿಸಿದ್ದಾರೆ.

ಸೆ.10ರಂದು ಪಣಪಿಲದಲ್ಲಿ ಮೊಸರು ಕುಡಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು


ಮೂಡುಬಿದಿರೆ: ಶ್ರೀ ಇಟಲ ಗೆಳೆಯರ ಬಳಗ ಪಣಪಿಲ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸೆ.10ರಂದು 13 ನೇ ವರ್ಷದ ಮೊಸರು ಕುಡಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜನಪದ ಕ್ರೀಡೆಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಣಪಿಲದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Post a Comment

0 Comments