ತುರ್ತು ಚಿಕಿತ್ಸೆಗೆ ಸ್ಪಂದಿಸಿದ ಸಾಯಿ ಮಾರ್ನಾಡ್ ಸೇವಾ ಸಂಘ
ಮೂಡುಬಿದಿರೆ: ಬೆಳುವಾಯಿ ಗ್ರಾಮದ ತಾನಾದಬೆಟ್ಟು ಪರಿಸರದ ನಿವಾಸಿ ಕುಟುಂಬದ ಆಧಾರ ಸ್ತಂಭವಾಗಿರುವ ಉಮೇಶ್ ಪೂಜಾರಿ ಅವರು ಅನಾರೋಗ್ಯವನ್ನು ಹೊಂದಿದ್ದು ಹೆಚ್ಚಿನ ಚಿಕಿತ್ಸೆ ಪಡೆಯಲು ಆರ್ಥಿಕ ಸಂಕಷ್ಠದಲ್ಲಿರುವ ಅವರಿಗೆ ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ)ಅಮನಬೆಟ್ಟು ಚಿಕಿತ್ಸೆಗಾಗಿ ರೂ 7000 ನೆರವನ್ನು ನೀಡಿದೆ.
ಕಡು ಬಡವರಾಗಿರುವ ಉಮೇಶ್ ಪೂಜಾರಿ ಅವರಿಗೆ ಬ್ರೈನ್ ಸ್ಟ್ರೋಕ್ ಆಗಿದ್ದು ಇದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಾಗಿದೆ. ಅವರಿಗೆ ಸರಿಯಾಗಿ ನಡೆದಾಡಲು ಫಿಸಿಯೋದ ಅಗತ್ಯವಿದ್ದು ಅಸಹಾಯಕರಾಗಿರುವ ಅವರಿಗೆ ಚಿಕಿತ್ಸೆಗೆ ಹಣ ಭರಿಸಲು ಕಷ್ಟಸಾಧ್ಯವಾಗಿದ್ದು ಇದನ್ನು ಮನಗಂಡ ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ ಚಿಕಿತ್ಸೆಗೆ ನೆರವು ನೀಡಿ ಮಾನವೀಯತೆ ಮೆರೆದಿದೆ.
0 Comments