ಎಸ್ ಎನ್ ಮೂಡುಬಿದಿರೆ ಪಾಲಿಟೆಕ್ನಿಕ್ : ನಿರ್ಮಾಣ್ 2023

ಜಾಹೀರಾತು/Advertisment
ಜಾಹೀರಾತು/Advertisment

 ಎಸ್ ಎನ್ ಮೂಡುಬಿದಿರೆ ಪಾಲಿಟೆಕ್ನಿಕ್ : ನಿರ್ಮಾಣ್ 2023



 ಮೂಡುಬಿದಿರೆ: ಎಸ್ ಎನ್ ಎಂ ಪಾಲಿಟೆಕ್ನಿಕ್ ಮೂಡುಬಿದಿರೆ ಇದರ ಸಿವಿಲ್ ವಿಭಾಗದ  ARIVA ಸಿವಿಲ್ ಕ್ಲಬ್ ನ ವತಿಯಿಂದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದಲ್ಲಿ ಬೇಕಾದ ಜ್ಞಾನ ಕೌಶಲ್ಯ ಆತ್ಮವಿಶ್ವಾಸ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಅನೇಕ ಚಟುವಟಿಕೆಗಳನ್ನು ಕಾಲೇಜಿನಲ್ಲಿ ನಿರ್ಮಾಣ್ 2023ರ ಹೆಸರಿನಲ್ಲಿ ನಡೆಸಲಾಯಿತು.

 ಕಾರ್ಯಕ್ರಮವನ್ನು  ವಿಕ್ರಂ ಶೆಟ್ಟಿ ವ್ಯವಸ್ಥಾಪಕ ನಿರ್ದೇಶಕರು ಇಶಾ ಇಂಫ್ರಾಟೆಕ್ ಮಂಗಳೂರು ಇವರು  ಉದ್ಘಾಟಿಸಿ  ಮಳೆ ನೀರಿನ ಕೊಯ್ಲು ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

 ಕಾಲೇಜಿನ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಅನೇಕ ಚಟುವಟಿಕೆಗಳನ್ನು ಸ್ಪರ್ಧೆಗಳನ್ನು ಆಯೋಜಿಸಲಾಯಿತು.

 ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಮಂಗಳೂರು ಇದರ ಆಶ್ರಯದಲ್ಲಿ ಯೆನಪೋಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಜಿ ಡಿಸೋಜಾ, ಪ್ರಭಾರತ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಇವರಿಂದ ನಡೆದ ಅತಿಥಿ ಉಪನ್ಯಾಸ ನಡೆಯಿತು.

 ಶೂನ್ಯ ತ್ಯಾಜ್ಯ ನಿರ್ವಹಣೆಯ ಅರಿವು ಮೂಡಿಸುವ ಸಲುವಾಗಿ ನಿವೃತ್ತ ಶಿಕ್ಷಲಿ ಶಶಿಪ್ರಭ  ಇವರಿಂದ ಕಸದಿಂದ ರಸ ಕಾರ್ಯಗಾರ ನಡೆಯಿತು.

 ಅಂತರ್ ಪಾಲಿಟೆಕ್ನಿಕ್ ಟೆಕ್ನಿಕಲ್ ಪ್ರೆಸೆಂಟೇಶನ್ ಸ್ಪರ್ಧೆಯು ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು. 

ಮೈಟ್ ಕಾಲೇಜಿನ ಡಾ. ಗಣೇಶ್ ಮೊಗವೀರ್, ಮೈಟ್ ಕಾಲೇಜಿನ  ವಿಭಾಗ ಮುಖ್ಯಸ್ಥರಾದ  ದಿನೇಶ್ ಕುಮಾರ್, ಆಕೃತಿ ಸಿಮೆಂಟ್ ಪ್ರಾಡಕ್ಟ್ ವಿಟ್ಲ ಹಾಗೂ ಅರ್ಜುನ್ ಕೆಜಿ ಯು.ಎಸ್. ಕೆ ಕನ್ಸ್ಟ್ರಕ್ಷನ್ ಉಡುಪಿ ಇವರು ತೀರ್ಪುಗಾರರಾಗಿ ಸಹಕರಿಸಿದರು.

 ಈ ಸ್ಪರ್ಧೆಯಲ್ಲಿ ಎಸ್ ಡಿಎಂ ಪಾಲಿಟೆಕ್ನಿಕ್ ತಂಡ ಪ್ರಥಮ ಸ್ಥಾನ ಗಳಿಸಿದರೆ ಎನ್ ಅರ್ ಎ ಎಂ ಪಾಲಿಟೆಕ್ನಿಕ್ ನಿಟ್ಟೆ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾಲೇಜಿನ ಪ್ರಾಂಶುಪಾಲರಾದ ಜೆ.ಜೆ.ಪಿಂಟೊ, ಸಿವಿಲ್ ವಿಭಾಗದ ಮುಖ್ಯಸ್ಥರಾದ ಗೋಪಾಲಕೃಷ್ಣ ಕೆ ಎಸ್, ARIVA ಸಿವಿಲ್ ಕ್ಲಬ್ಬಿನ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಬೋದಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

Post a Comment

0 Comments