ವಾಲ್ಪಾಡಿ : ನೇಣು ಬಿಗಿದು ವಿವಾಹಿತ ಆತ್ಮಹತ್ಯೆ
ಸಾವಿನ ಸುತ್ತ ಸಂಶಯದ ಹುತ್ತ...
ಮೂಡುಬಿದಿರೆ: ಕೃಷಿಕ, ವಾಲ್ಪಾಡಿ ಗ್ರಾ.ಪಂ.ವ್ಯಾಪ್ತಿಯ ಪಾದೆಮನೆ ನಿವಾಸಿ ಉಮೇಶ್ ಪೂಜಾರಿ (44ವ) ಎಂಬವರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದ್ದಾರೆ.
ಉಮೇಶ್ ಪೂಜಾರಿ ಅವರು ಭಾನುವಾರದಂದು ವಾಲ್ಪಾಡಿಯ ವಸಂತ ಎಂಬವರ ಮನೆಗೆ ಕೆಲಸಕ್ಕೆ ಬರುವುದಾಗಿ ತಿಳಿಸಿದ್ದರು. ಆದರೆ ಅವರು ಅಲ್ಲಿಗೆ ಹೋಗದೆ ಇರುವುದರಿಂದ ಸೋಮವಾರ ಬೆಳಿಗ್ಗೆ ವಸಂತ ಅವರು ಮನೆಗೆ ಬಂದು ನೋಡಿದಾಗ ಮನೆಯ ಸಿಮೆಂಟ್ ಶೀಟ್ ಗೆ ಅಡ್ಡ ಹಾಕಿರುವ ಕಬ್ಬಿಣದ ರಾಡ್ ಗೆ ಬೈರಾಸ್ ನಿಂದ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದರು.
ನಾಲ್ಕು ತಿಂಗಳ ಹಿಂದೆ ಇವರ ಪುತ್ರಿ, ಹೈಸ್ಕೂಲ್ ವಿದ್ಯಾರ್ಥಿನಿ ಯುತಿ ಎಂಬಾಕೆಯ ಶವ ತಮ್ಮ ಮನೆಯ ಬಾವಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಪ್ರಕರಣ ಕೇಸು ದಾಖಲಾಗಿತ್ತು.
ಆದರೆ ಇದೀಗ ನಾಲ್ಕೇ ತಿಂಗಳ ಅಂತರದಲ್ಲಿ ಅದೇ ಮನೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಉಮೇಶ್ ಅವರ ಪತ್ನಿ ಮತ್ತು ಇನ್ನೋರ್ವ ಮಗಳು ಕಳೆದ ಕೆಲವು ಸಮಯಗಳಿಂದ ಬಾಡಿಗೆ ಮನೆಯಲ್ಲಿದ್ದಾರೆನ್ನಲಾಗಿದೆ. ಈ ಎರಡೂ ಸಾವುಗಳ ಬಗ್ಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲದಿರುವುದರಿಂದ ಊರವರು ಸಂಶಯವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ಪೊಲೀಸರಿಗೂ ಕೂಡಾ ಈ ಆತ್ಮಹತ್ಯೆಯ ಬಗ್ಗೆ ಸಂಶಯವಿದೆ ಎನ್ನಲಾಗಿದೆ.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
0 Comments