ಮೊದಲ ಬಾರಿ ಪುತ್ತಿಗೆ ಗ್ರಾಮ ಪಂಚಾಯತ್ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ
ಮೂಡುಬಿದಿರೆ : 2022-23 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮ ಪಂಚಾಯತ್ ಮೊದಲ ಬಾರಿ ಆಯ್ಕೆಯಾಗಿದೆ.
ತಾಲೂಕಿನ ಎರಡನೇ ಅತೀ ದೊಡ್ಡ ಗ್ರಾಮವಾಗಿರುವ ಪುತ್ತಿಗೆ ಗ್ರಾಮ ಪಂಚಾಯತ್ ಜನರ ಗುಣಮಟ್ಟವನ್ನು ಹೆಚ್ಚಿಸಲು ಕೈಗೊಂಡ ಕಾರ್ಯಕ್ರಮಗಳು, ಹಣಕಾಸಿನ ವಿಷಯದಲ್ಲಿ ಶಿಸ್ತುಬದ್ಧ ಕ್ರಮಗಳು, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ, ಉತ್ತಮ ಆಡಳಿತ, ಗ್ರಾ.ಪಂಚಾಯತ್ ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ಗ್ರಾಮದ ನಾಗರಿಕರಿಗೆ ಒದಗಿಸಿರುವುದು ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡು ಸರ್ವೋತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿರುವುದನ್ನು ಗುರುತಿಸಿ ಪುತ್ತಿಗೆ ಪಂಚಾಯತ್ ನ್ನು ಆಯ್ಕೆ ಮಾಡಲಾಗಿದೆ.
-----------
ಪುತ್ತಿಗೆ ಗ್ರಾ.ಪಂ ಇದೇ ಮೊದಲ ಬಾರಿ "ಗಾಂಧಿ ಗ್ರಾಮ ಪುರಸ್ಕಾರ" ಕ್ಕೆ ಆಯ್ಕೆಯಾಗಿರುವುದಕ್ಕೆ ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಪುತ್ತಿಗೆ ಪಂಚಾಯತ್ ನ್ನು ಇನ್ನಷ್ಟು ಬಲಗೊಳಿಸಲಾಗುವುದು - ಭೀಮ ನಾಯ್ಕ್ ( ಪಿಡಿಒ - ಪುತ್ತಿಗೆ ಗ್ರಾಮ ಪಂಚಾಯತ್)
* ನಮ್ಮ ಪಂಚಾಯತ್ ಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದಕ್ಕೆ ಖುಷಿಯಾಗಿದೆ. ಹಿಂದಿನ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ, ಸದಸ್ಯರುಗಳು ಮತ್ತು ಸಿಬಂದಿ ರ್ವ ಉತ್ತಮ ಕೆಲಸಗಳನ್ನು ಮಾಡಲು ಪಂಚಾಯತ್ ಗೆ ಸಹಕಾರ ನೀಡಿದ್ದಾರೆ. ಹಾಗೂ ಪಿಡಿಒ ಅವರು ಅಭಿವೃದ್ಧಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರಿಂದ ಪುರಸ್ಕಾರ ಬರಲು ಸಾಧ್ಯವಾಯಿತು. ಪುರಸ್ಕಾರ ಬಂದಿರುವುದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಕಾರಿಯಾಗಿದೆ ಎಂದು ಅಧ್ಯಕ್ಷೆ ರಾಧಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
0 Comments