ಹೊಸಬೆಟ್ಟು ಸೇವಾ ಸಹಕಾರಿ ಸಂಘ, ಶೇಕಡಾ 17% ಡಿವಿಡೆಂಟ್ ಘೋಷಣೆ
ಹೊಸಬೆಟ್ಟು ಸೇವಾ ಸಹಕಾರಿ ಸಂಘ .ನಿ ಹೊಸಬೆಟ್ಟು ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಪದ್ಮಪ್ರಸಾದ್ ಅಧ್ಯಕ್ಷತೆಯಲ್ಲಿ ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ಒಟ್ಟು 1416 ಎ ತರಗತಿ ಸದಸ್ಯರಿದ್ದು 49.72 ಲಕ್ಷ ರೂ ಪಾಲುಬಂಡವಾಳವಿದೆ. ಒಟ್ಟು ಠೇವಣಿ 9.73 ಕೋಟಿ.ರೂ ಹೊಂದಿರುತ್ತದೆ. ಸದಸ್ಯರ ಬೇಡಿಕೆಗೆ ಅನುಗುಣವಾಗಿ 8.83 ಕೋಟಿ ರೂ ಸಾಲವನ್ನು ವಿತರಿಸಲಾಗಿದೆ. ಈ ಪೈಕಿ ರೈತ ಸದಸ್ಯರಿಗೆ 4.43 ಕೋಟಿ ರೂ. ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲಾಗಿದೆ ಶೇ 97% ಸಾಲ ವಸೂಲಾತಿ ಆಗಿದೆ. ಸಂಘವು 1.ಕೋಟಿ ರೂ. ಆದಾಯ ಗಳಿಸಿದ್ದು ಬಡ್ಡಿ ವೆಚ್ಚ ಕಳೆದು 23.19ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 17% ಡಿವಿಡೆಂಟ್ ಘೋಷಿಸಿದೆ 22-23 ನೇ ಸಾಲಿನಲ್ಲಿ ಲೆಕ್ಕ ಪರಿಶೋಧಕರು ಸಂಘವನ್ನು ಎ ತರಗತಿ ಎಂದು ವಗೀಕರಿಸಿರುತ್ತಾರೆ. ಸಂಘದ ಸರ್ವತೊಮುಖ ಪ್ರಗತಿಯನ್ನು ಗುರುತಿಸಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ ಎಂದು ಸಂಘದ ವಾರ್ಷಿಕ ಪ್ರಗತಿಯ ಬಗ್ಗೆ ಅಧ್ಯಕ್ಷರಾದ ಶ್ರೀ ಪದ್ಮಪ್ರಸಾದ್ ಸಭೆಯಲ್ಲಿ ವಿವರ ನೀಡಿದರು . ಸಂಘದ ಕಾರ್ಯ ವ್ಯಾಪ್ತಿಯಲ್ಲಿ 960 ಪಡಿತರ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ಬೆಳೆ ವಿಮೆಯೋಜನೆಯಡಿಯಲ್ಲಿ 196 ರೈತರು ನೊಂದಾಯಿಸಿದ್ದು ರೈತರು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಅಧ್ಯಕ್ಷರು ಹೇಳಿದರು, ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ಸಿದ್ದೇಶ್ ಲೆಕ್ಕಪರಿಶೋಧನ ವರದಿ, ಆಯವ್ಯಯ ಪಟ್ಟಿಯನ್ನು ಮಂಡಿಸಿದರು. ಸಂಘದ ಮಹಾಸಭೆಯಲ್ಲಿ ನಿವೃತ್ತ ಸಿ ಇ ಓ ಶ್ರೀ ಸಮಂತ್ ಕುಮಾರ್ ರವರನ್ನು ಸಂಘದ ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಸನ್ಮಾನಿಸಿ ಗೌರವಿಸಿದರು, ನಿದೇಶಕರಾದ ಪೀಟರ್ ವಿಲ್ಪೆಡ್ ಮೆಂಡೋನ್ಸ ಸನ್ಮಾನಿತರ ಬಗ್ಗೆ ಮಾತನಾಡಿದರು.ಹೊಸಬೆಟ್ಟು ಸರಕಾರಿ ಪ್ರೌಢಶಾಲೆಯ ಉನ್ನತ ಶ್ರೇಣಿಯಲ್ಲಿ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಸಂಘದ ನಿರ್ದೇಶಕರಾದ ರಾಜೇಶ್ ಪೂಜಾರಿ ಅವರು ಸ್ವಾಗತಿಸಿದರು. ರೀಟಾ ಕುಟಿನ್ಹಾ ವಂದಿಸಿದರು.
ಸOಘದ ಉಪಾಧ್ಯಕ್ಷರಾದ ಸಚೀಂದ್ರ ನಿದೇಶಕರಾದ ಕೆ.ಪೂವಪ್ಪ ಸಾಲ್ಯಾನ್, ವಲೇರಿಯನ್ ಕುಟಿನ್ಹಾ, ಸಂಜೀವ ನಾಯ್ಕ, ಶ್ರೀಮತಿ ಸೆವುರಿನ್ ರೊಡ್ರಿಗಸ್, ಪೀಟರ್ ವಿಲ್ಪೆಡ್ ಮೆಂಡೋನ್ಸ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು
0 Comments