ಮೂಡುಬಿದಿರೆ ಪುರಸಭೆಯಿಂದ ಪೌರಕಾರ್ಮಿಕರ ದಿನಾಚರಣೆ
ಖಾಯಂಮಾತಿ ಪೌರಕಾರ್ಮಿಕರಿಗೆ ಆದೇಶಪತ್ರ ವಿತರಣೆ, ಸನ್ಮಾನ
ಮೂಡುಬಿದಿರೆ : ಇಲ್ಲಿನ ಪುರಸಭೆಯ ವತಿಯಿಂದಪೌರ ಕಾರ್ಮಿಕ ದಿನವನ್ನು ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ಸೋಮವಾರ ಆಚರಿಸಲಾಯಿತು.
ಪುರಸಭಾ ಮುಖ್ಯಾಧಿಕಾರಿ ಇಂದು.ಎಂ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ನಗರವನ್ನು ಸುಂದರಗೊಳಿಸುವವರು ಪೌರಕಾರ್ಮಿಕರು. ಸ್ವಚ್ಛತೆ ಆದ್ಯತೆಗೆ ನೀಡುವ ಪೌರ ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪುರಸಭೆಯ ವತಿಯಿಂದ ಆರೋಗ್ಯ ಶಿಬಿರ, ನಗರೋತ್ಥಾನ ಯೋಜನೆಯಡಿಯಲ್ಲಿ ಜೀವ ವಿಮೆ, ಸಮವಸ್ತ್ರ,ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡಲಾಗುವುದು ಎಂದ ಅವರು 46 ಮಂದಿ ಪೌರಕಾರ್ಮಿಕರಲ್ಲಿ 39 ಮಂದಿಗೆ ಜಿಲ್ಲಾಧಿಕಾರಿಯವರು ಖಾಯಂಮಾತಿ ಮಾಡಿದ್ದಾರೆ.ಉಳಿದವರಿಗೆ ಮುಂದಿನ ದಿನಗಳಲ್ಲಿ ನೇಮಕಾತಿ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಆದೇಶ ಪತ್ರ ವಿತರಣೆ: ಖಾಯಂಮಾತಿಗೊಂಡಿರುವ 39 ಮಂದಿ ಪೌರ ಕಾರ್ಮಿಕರಿಗೆ ಆದೇಶಪತ್ರವನ್ನು ವಿತರಿಸಲಾಯಿತು.
ಸನ್ಮಾನ: ಮೂಡುಬಿದಿರೆ 60 ನೇ ವರ್ಷದ ಗಣೇಶೋತ್ಸವದ ವಿಸರ್ಜನಾ ಸಂದರ್ಭದಲ್ಲಿ ಹಗಲು-ರಾತ್ರಿ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಉತ್ತಮ ಕಾರ್ಯನಿರ್ವಹಿಸುತ್ತಿರುವ ಎರಡು ತಂಡಗಳಿಗೆ ವೇದನ್ ಟ್ರಸ್ಟ್ ನಿಂದ ಪ್ರಶಸ್ತಿ ಪತ್ರವನ್ನು ನೀಡಲಾಯಿತು. ವಾಹನ ಚಾಲಕರನ್ನು ಗೌರವಿಸಲಾಯಿತು.
ಪುರಸಭಾ ನಿರ್ಗಮಿತ ಅಧ್ಯಕ್ಷ ಪ್ರಸಾದ್ ಕುಮಾರ, ಸದಸ್ಯರಾದ ಸುರೇಶ್ ಕೋಟ್ಯಾನ್, ನಾಗರಾಜಪೂಜಾರಿ, ಕೊರಗಪ್ಪ, ಸುರೇಶ್ ಪ್ರಭು, ನವೀನ್ ಶೆಟ್ಟಿ, ಶ್ವೇತಾ ಕುಮಾರಿ, ಸ್ವಚ್ಛತಾ ರಾಯಭಾರಿ ಸಂಧ್ಯಾ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸುನಿಲ್, ಕಾರ್ಯದರ್ಶಿ ಉದಯ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪುರಸಭಾ ಪರಿಸರ ಪರಿಸರ ಅಭಿಯಂತರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
_------------------
ಖಾಯಂಮಾತಿಗೊಂಡಿರುವ ಪೌರಕಾರ್ಮಿಕರು : ಉಮೇಶ್ ನಾಯ್ಕ್, ರೇಣುಕಾ ನಿಂಗಪ್ಪ ಬೆಂಚಮಟ್ಟಿ, ರೇಣುಕಾ ಪರೂತಿ, ಸುಮಿತ್ರ, ಉದಯ, ಚಂದ್ರಹಾಸ, ಸುನಂದ, ರವಿ ಎನ್., ವಾಸು ಕುತ್ಯಾರ್, ನೀಲಿ ಬಾಯಿ, ಹನುಮಂತ ನಾಯ್ಕ್, ರವೀಂದ್ರ, ನಿಂಗಪ್ಪ ಪಕೀರಪ್ಪ ಬೆಣಚಮಟ್ಟಿ, ರಾಜು, ವಿಲಾಕ್ಷಿ ಬಾಯಿ, ಪಾಂಡು, ದೂಗಿ ಬಾಯಿ.
ಪರೂತಿ ಅಡಿವೆಪ್ಪ, ಯಶೋಧ, ಶಂಕರ, ಸುನೀಲ್, ರಾಜು, ಸೂರ್ಯ ನಾಯ್ಕ್, ಬಾಬು ಕೊರಗ, ರವಿ, ಸುಂದರ, ಶ್ರೀಧರ, ಉಮೇಶ, ಲಕ್ಷ್ಮೀ, ಮನೋಜ್ ಕುಮಾರ್, ಮಾಂತೇಶ್ ನಾಯ್ಕ್, ರವಿ, ವಿರ್ಯಾ ನಾಯ್ಕ್, ಪುಷ್ಪ, ಕಮಲಿ ಬಾಯಿ, ಸುಂದರಿ, ಜಯ ಮತ್ತು ಜಗದೀಶ್ ಅವರನ್ನು ಜಿಲ್ಲಾಧಿಕಾರಿ ಖಾಯಂಮಾತಿಗೊಳಿಸಿ ಆದೇಶ ಹೊರಡಿಸಿದ್ದಾರೆ.
-------
0 Comments