ವಿಪಕ್ಷೀಯರ ವಿರೋಧದ ಮಧ್ಯೆಯೇ ಉದ್ಘಾಟನೆಗೊಂಡಿತು ಇರುವೈಲು ಗ್ರಾ.ಪಂ.ನೂತನ ಕಟ್ಟಡ
ಮೂಡುಬಿದಿರೆ: ಪ್ರೊಟೋಕಾಲನ್ನು ಪಾಲಿಸಿಲ್ಲ, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ವಿರೋಧದ ಪಕ್ಷದ ಸದಸ್ಯರು ಮತ್ತು ಕೆಲ ಬೆಂಬಲಿತರ ವಿರೋಧದ ಮಧ್ಯೆ ಪೊಲೀಸರ ಬಂದೋಬಸ್ತಿನೊಂದಿಗೆ ಇರುವೈಲು ಗ್ರಾ.ಪಂ.ನ ಮತ್ತು ತೋಡಾರು ನೂತನ ಕಟ್ಟಡವು ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ದೀಪ ಬೆಳಗಿಸುವ ಮೂಲಕ ಮಂಗಳವಾರ ಉದ್ಘಾಟನೆಗೊಂಡಿತು.
ಕಳೆದ ತಿಂಗಳು 31ನೇ ತಾರೀಕಿಗೆ ಪೂರ್ವತಯಾರಿಯೊಂದಿಗೆ ಉದ್ಘಾಟನಾ ಕಾರ್ಯಕ್ರಮ ಸಿದ್ಧತೆ ಪೂರ್ಣಗೊಂಡಿದ್ದರೂ ಪ್ರೊಟೊಕಾಲ್ ಕಾರಣದಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹರ್ಣಾಧಿಕಾರಿಯವರ ಅಮಾನತುಗೊಳಿಸಲಾಗಿತ್ತು. ಹಳೆಯ ಆಮಂತ್ರಣಕ್ಕೆ ದಿನಾಂಕವನ್ನು ಬದಲಾಯಿಸಿ ಇಂದು ಕಟ್ಟಡ ಉದ್ಘಾಟಿಸಲು ಮುಂದಾಗಿತ್ತು.
ಆದರೆ ಸೋಮವಾರ ಸಂಜೆಯಿಂದಲೇ ಸರ್ವಪಕ್ಷೀಯರ ಮತ್ತು ಗ್ರಾಮದ ಜನರ ವಿಶ್ವಾಸ ಪಡೆದುಕೊಳ್ಳದೆ ತುರ್ತಾಗಿ ನೆರೆವೇರಿಸುತ್ತಿರುವುದಕ್ಕೆ ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಗ್ರಾಮದ ಸರ್ವಪಕ್ಷೀಯ ಜನರನ್ನು ಮತ್ತು ಹಿರಿಯ ಪ್ರಮುಖ ನಾಗರೀಕರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಕಟ್ಟಡವನ್ನು ಉದ್ಘಾಟನೆ ಮಾಡುವುದು ಒಳಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.ಅಲ್ಲದೆ ಸಂಬಂಧಪಟ್ಟ ಇಲಾಖೆಯು ಪಂಚಾಯತ್ ಅಧ್ಯಕ್ಷರಿಗೆ ಕರೆ ಮಾಡಿ ಉದ್ಘಾಟನೆ ಮಾಡಬೇಡಿ ಎಂಬ ಸೂಚನೆಯನ್ನೂ ನೀಡಿತ್ತು ಎನ್ನಲಾಗಿದೆ. ಇದು ಆಡಳಿತ ಪಕ್ಷಕ್ಕೆ ಸ್ವಪ್ರತಿಷ್ಟೆ ಎಂಬಂತ್ತಾಗಿದ್ದು .
ಇಂದು ಗ್ರಾ.ಪಂ. ಕಟ್ಟಡ ಉದ್ಘಾಟನೆಯಾಗುವುದಿಲ್ಲ ಎಂಬ ಸುದ್ದಿಯೂ ಹಬ್ಬಿತ್ತು. ಇಲ್ಲಿ ಗೊಂದಲ ಏರ್ಪಟ್ಟಿದ್ದರಿಂದ ಯಾವುದೇ ಅಹಿತರ ಘಟನೆಗಳು ನಡೆಯಬಾರದೆಂಬ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಸಿಬಂದಿಗಳೊಂದಿಗೆ ಬೆಳಿಗ್ಗೆ 6 ಗಂಟೆಯ ವೇಳೆಗೆ ಜಮಾಯಿಸಿದ್ದರು.
ಈ ಎಲ್ಲಾ ಗೊಂದಲ, ವಿರೋಧದ ಮಧ್ಯೆ ಬೆಳಿಗ್ಗೆ 10.50ರ ಶಾಸಕ ಉಮಾನಾಥ ಕೋಟ್ಯಾನ್ ಅವರು ಆಗಮಿಸಿ ನೂತನ ಗ್ರಾ.ಪಂ.ಕಟ್ಟಡದ ಬಳಿಗೆ ಬಂದು ಬಾಗಿಲು ತೆಗೆಸಿದರು. ನಂತರ ದೀಪ ಬೆಳಗಿಸಿ ಕಟ್ಟಡವನ್ನು ಉದ್ಘಾಟಿಸಿದರು. ಬಿಜೆಪಿ ಮುಖಂಡ ಪ್ರತಾಪ್ ಸಿಂಹ ನಾಯಕ್, ಜಿ.ಪಂ.ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಪಂಚಾಯತ್ ಅಧ್ಯಕ್ಷ ವಲೇರಿಯನ್ ಕುಟಿನ್ಹ ಹಾಗೂ ಉಪಾಧ್ಯಕ್ಷೆ , ಬೆಂಬಲಿತ ಸದಸ್ಯರು ಉಪಸ್ಥಿತರಿದ್ದರು.
0 Comments