ಬಾಂಧವ್ಯ ಮಹಿಳಾ ಸಂಘದಿಂದ ಆಟಿಡೊಂಜಿ ದಿನ
ಮೂಡುಬಿದಿರೆ: ಬಾಂಧವ್ಯ ಮಹಿಳಾ ಸಂಘದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಭಾನುವಾರ ಹುಡ್ಕೋ ಕಾಲೋನಿ ಯಲ್ಲಿ ಆಯೋಜಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಸಂಘದ ನೂತನ ಕಾರ್ಯದರ್ಶಿಯಾಗಿ ರೂಪಶ್ರೀ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷೆ ಅಮೃತ ಹೆಗ್ಡೆ , ಕೋಶಾಧಿಕಾರಿ ಶೋಭ ಎಸ್ ಹೆಗ್ಡೆ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
0 Comments