ಅಣಬೆ ಕೃಷಿಗೂ ಬಂತು ಇಲೆಕ್ಟ್ರಾನಿಕ್ಸ್ ತಂತ್ರಜ್ಞಾನ.. !
ಇತ್ತೀಚಿನ ದಿನಗಳಲ್ಲಿ ಅಣಬೆ ಕೃಷಿಗೆ ಹೆಚ್ಚಿನ ಬೇಡಿಕೆಯಿದೆ. ಅಣಬೆ ಕೃಷಿಗೆ ಸೂಕ್ತವಾದ ವಾತಾವರಣ ಹಾಗೂ ಹವಾಮಾನದ ಅಗತ್ಯವಿರುತ್ತದೆ. ಕರಾವಳಿ ಭಾಗಗಳಲ್ಲಿ ಅಣಬೆ ಬೆಳೆಯಲು ಬೇಕಾದ ವಾತಾವರಣ ಸ್ವಾಭಾವಿಕವಾಗಿ ಇಲ್ಲಿನ ಬಿಸಿಲು, ಮಳೆ ಹಾಗೂ ತೇವಾಂಶ ಭರಿತ ಹವಾಗುಣದಿಂದ ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ತಂತ್ರಜ್ಞಾನ ಬಳಸಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ವಿಭಾಗದ ಪ್ರಾಧ್ಯಾಪಕ ಸುಧಾಕರ್ ಎಚ್. ಎಮ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶಶಾಂಕ್ ಎಸ್. ಕಶ್ಯಪ್, ಪ್ರತೀಕ್ ಕುಮಾರ್, ಸಾತ್ವಿ ಹಾಗೂ ಸುಮಾ ಹೊಸ ಮಾದರಿಯೊಂದನ್ನು ರಚಿಸಿದ್ದು ಅದನ್ನು ಮಿಜಾರಿನ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದ ೪೬ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್ಗಳ ವಿಚಾರ ಸಂಕಿರಣ ಮತ್ತು ಪ್ರದರ್ಶನದಲ್ಲಿ ಪ್ರದರ್ಶಿಸಿದ್ದರು.
ಈ ಮೂಲಕ ಅಣಬೆ ಕೃಷಿಗೂ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಈ ಯೋಜನೆಯಲ್ಲಿ ಡಿಎಚ್‌ಟಿ೧೧ ಸೆನ್ಸಾರ್ ಬಳಸಿ ಉಷ್ಣತೆ ಹಾಗೂ ತೇವಾಂಶವನ್ನು ನಿಯಂತ್ರಿಸಹುದು. ಜಿಎಸ್‌ಎಮ್ ಮಾಡ್ಯೂಲ್ ಅಳವಡಿಸುವ ಮೂಲಕ, ನಾವಿರುವ ಸ್ಥಳದಿಂದಲೇ ಬ್ಲಿಂಕ್ ಆ್ಯಪ್ ಮೂಲಕ ಅಣಬೆಯ ಬೆಳವಣಿಗೆಗೆ ಬೇಕಾದ ವಾತಾವರಣವನ್ನು ಅಗತ್ಯತೆಯನ್ನು ಪರಿಶೀಲಿಸಬಹುದು. ಒಟ್ಟಿನಲ್ಲಿ ವಿದ್ಯಾರ್ಥಿಗಳ ಈ ಯೋಜನೆಯ ಮುಖಾಂತರ ಯಾವುದೇ ಸ್ಥಳದಲ್ಲಿ ಅಣಬೆ ಕೃಷಿಯನ್ನು ನಿರಾಯಾಸವಾಗಿ ಮಾಡಬಹುದು.
0 Comments