ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿರಂಜನ ಕುಮಾರ್ ಅವರಿಗೆ ಬೀಳ್ಕೊಡುಗೆ
ಮೂಡುಬಿದಿರೆ: ಕಳೆದ ಒಂದೂವರೆ ವರ್ಷಗಳಿಂದ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ಹಾಸನ ಜಿಲ್ಲೆಯ ಸಕಲೇಶಪುರ ರೂರಲ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುವ ನಿರಂಜನ್ ಕುಮಾರ್ ಅವರಿಗೆ ಪಣಂಬೂರು ಉತ್ತರ ವಿಭಾಗ ಮೂಡುಬಿದಿರೆ ಪೊಲೀಸ್ ಠಾಣೆ ಮಂಗಳೂರು ನಗರದ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಎಂಸಿಎಸ್ ಬ್ಯಾಂಕಿನ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆಯಿತು.
ಸರಕಾರಿ ಅಭಿಯೋಜಕಿ ಶೋಭಾ ಎಸ್, ಮಂಗಳೂರು ಸಿಸಿಬಿ ವಿಭಾಗ ಪೊಲೀಸ್ ಉಪ ನಿರೀಕ್ಷಕ ಸುದೀಪ್, ನೂತನ ಪೊಲೀಸ್ ನಿರೀಕ್ಷಕ ಸಂದೇಶ್ ಪಿಜಿ, ಪೊಲೀಸ್ ಉಪ ನಿರೀಕ್ಷಕರಾದ ಸಿದ್ದಪ್ಪ ನರನೂರ, ದಿವಾಕರ ರೈ ಸಹಿತ ಸಿಬಂದಿಗಳು ಈ ಸಂದರ್ಭದಲ್ಲಿದ್ದರು.
0 Comments