ಆ. 27ರಂದು ಮೂಡುಬಿದಿರೆ ಕೋ-ಓಪರೇಟಿವ್ ಸರ್ವೀಸ್ ಸೊಸೈಟಿ ಮಹಾಸಭೆ
ಮೂಡುಬಿದಿರೆ ಕೋ-ಓಪರೇಟಿವ್ ಸರ್ವೀಸ್ ಸೊಸೈಟಿ ಲಿ.2022-23ನೇಯ ಸಾಲಿನ ಮಹಾಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಎಂ. ಬಾಹುಬಲಿ ಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಬಳಿ ಇರುವ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಆಗಸ್ಟ್ 27ರಂದು ಬೆಳಗ್ಗೆ 10ಗಂಟೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊಸೈಟಿಯ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಪ್ರಸಕ್ತ ಸಾಲಿನಲ್ಲಿ 11,886 ಸದಸ್ಯ ಬಲ ಹೊಂದಿದ್ದು 19.31ಕೋಟಿ ಪಾಲು ಬಂಡವಾಳ 54.24ಕೋಟಿ ಕ್ಷೇಮನಿಧಿ, 12.99ಕೋಟಿ ಇತರೆ ನಿಧಿ 488.39 ಕೋಟಿ ಠೇವಣಿಯನ್ನು ಹೊಂದಿದೆ. 574.94 ಕೋಟಿ ದುಡಿಯುವ ಬಂಡವಾಳ, 458.13 ಕೋಟಿ ಸದಸ್ಯ ಸಾಲ ಸಂಘದ್ದಾಗಿದೆ. ಪ್ರಸಕ್ತ ಸಾಲಿನಲ್ಲಿ 11.50ಕೋಟಿ ನಿವ್ವಳ ಲಾಭ ಗಳಿಸಿಕೊಂಡಿದ್ದು,, ಕಳೆದ ದಶಕದಿಂದಲೂ ಲಾಭದಲ್ಲಿ ಏರಿಕೆಯತ್ತಲೇ ಸಾಗಿದೆ. ಹಲವಾರು ವರ್ಷಗಳಿಂದ `ಎ' ಗ್ರೇಡ್ ಲೆಕ್ಕಪರಿಶೋಧನ ವರ್ಗೀಕರಣ ಹೊಂದಿದ್ದು, ಪ್ರತೀ ಸದಸ್ಯರಿಗೆ 25ಶೇ. ಲಾಭಾಂಶ ನೀಡುತ್ತಿದೆ ಎಂದರು
ವಿಶೇಷ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಮಾತನಾಡಿ, ಸಂಘದ ಸಿಆರ್‌ಎಆರ್ 16.76ಶೇ. ಹೊಂದಿರುವುದು ಸದೃಢತೆಗೆ ಸಾಕ್ಷಿಯಾಗಿದೆ. ಸೊಸೈಟಿ ಸದಸ್ಯರ ಆರೋಗ್ಯಕ್ಕಾಗಿ ಕಲ್ಪವೃಕ್ಷ ಆರೋಗ್ಯ ಕಾರ್ಡ್, ರೈತರ ಪಿಂಚಣಿ, ಸೋಲಾರ್ ಅಳವಡಿಕೆಗೆ ಅನುದಾನ, ಮಳೆಕೊಯ್ಲು ಅಳವಡಿಕೆ ಮುಂತಾದ ಯೋಜನೆಗಳ ಮೂಲಕ ಪ್ರೋತ್ಸಾಹವನ್ನು ನೀಡುತ್ತಿದೆ.
ಕ್ಯಾನ್ಸರ್, ಹೃದ್ರೋಗ ಮತ್ತು ಕಿಡ್ನಿ ಸಮಸ್ಯೆ ಹೊಂದಿದವರಿಗೆ ಚಿಕಿತ್ಸೆಗೆಗಾಗಿ ಗರಿಷ್ಠ ರೂ. 15ಸಾವಿರ, ಮರಣನಿಧಿಯಾಗಿ ರೂ. 12ಸಾವಿರನ್ನು ನೀಡಲಾಗುತ್ತಿದೆ. ಆದಾಯ ತೆರಿಗೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ಸೊಸೈಟಿಗೆ ಸುಮಾರು 6 ಕೋಟಿ ರೂ. ಉಳಿತಾಯವಾಗಿದೆ. ಸದಸ್ಯರು ಸೊಸೈಟಿಯಲ್ಲಿ ವ್ಯವಹಾರಗಳನ್ನು ನಡೆಸುವ ಮೂಲಕ ಪ್ರೋತ್ಸಾಹ ನೀಡುವಂತೆಯೂ ವಿನಂತಿಸಲಾಗಿದೆ. ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಸೊಸೈಟಿಯ ವತಿಯಿಂದ 2 ಡಯಾಲೀಸಿಸ್ ಮೆಷಿನ್ ಹಾಗೂ 1 ವೆಂಟಿಲೇಟರ್ ಅಳವಡಿಸಿ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಪ್ರಯೋಜನ ಒದಗಿಸಲಾಗುತ್ತಿದೆ. ಆ.27ರಂದು ನಡೆಯುವ ಮಹಾಸಭೆಗೆ ಬರುವಾಗ ಅಗತ್ಯವಾಗಿ ಸಂಘದ ಗುರುತು ಕಾರ್ಡು ತರಬೇಕು ಎಂದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಧರಣೇಂದ್ರ ಜೈನ್, ಸೊಸೈಟಿ ಉಪಾಧ್ಯಕ್ಷೆ ಪ್ರೇಮಾ ಎಸ್. ಸಾಲ್ಯಾನ್, ನಿರ್ದೇಶಕ ಎಂ. ಗಣೇಶ್ ನಾಯಕ್, ಮನೋಜ್ ಶೆಟ್ಟಿ, ಸಿ. ಹೆಚ್. ಅಬ್ದುಲ್ ಗಫೂರ್, ಎಂ.ಪಿ ಅಶೋಕ್ ಕಾಮತ್, ಎಂ. ಜ್ಞಾನೇಶ್ವರ ಕಾಳಿಂಗ ಪೈ, ಎಂ. ಜಯರಾಮ ಕೋಟ್ಯಾನ್, ಎಂ. ಪದ್ಮನಾಭ, ದಯಾನಂದ ನಾಯ್ಕ, ಅನಿತಾ ಶೆಟ್ಟಿ, ವಿಮಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
0 Comments