ಸೌದಿ ಜೈಲಿನಿಂದ ನಳಿನ್ ಕುಮಾರ್ ಕಟೀಲ್‌ಗೆ ಬಂತು ಇಮೇಲ್-ಶೀಘ್ರದಲ್ಲೇ ಸಿಗಲಿದೆ ಗುಡ್ ನ್ಯೂಸ್.!
ಹ್ಯಾಕರ್‌ಗಳ ವಂಚನೆಯಿಂದ ಸೌದಿಯ ರಿಯಾದ್ ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಚಂದ್ರಶೇಖರ್ ಎನ್ನುವ ಅನಿವಾಸಿ ಭಾರತೀಯ ಉದ್ಯೋಗಿಗೆ ಬಿಡುಗಡೆ ಭಾಗ್ಯ ಒದಗಿ ಬರುವ ಸಂಭವ ಶೀಘ್ರದಲ್ಲೇ ಇದೆ ಎನ್ನಲಾಗಿದೆ.
ಈ ಸಂಬಂಧ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲುರವರು ಕೇಂದ್ರ ಸರ್ಕಾರದ ಮೂಲಕ ಸೌದಿ ರಾಯಭಾರಿ ಕಚೇರಿಗೆ ವಿವರಣೆ ನೀಡಿ ಪತ್ರ ಬರೆದಿದ್ದು ಇದೀಗ ಪತ್ರಕ್ಕೆ ಸ್ಪಂದನೆ ದೊರೆತಿದೆ ಎನ್ನಲಾಗಿದೆ.
ಸಂಸದ ನಳಿನ್ ಕುಮಾರ್ ಕಟೀಲು ರವರ ದೆಹಲಿಯ ಕಛೇರಿಗೆ ಸೌದಿ ಅರೇಬಿಯಾದ ರಿಯಾದ್ ಜೈಲಿನಿಂದಲೇ ಇಮೇಲ್ ಬಂದಿದ್ದು ಹಲವಾರು ವಿವರಣೆಗಳನ್ನು ಒದಗಿಸಿದೆ.
ಒಂದು ಕಡೆಯಿಂದ ಚಂದ್ರಶೇಖರ್ ಅವರ ಸ್ನೇಹಿತರು ಬಿಡುಗಡೆಗೆ ಸತತ ಪ್ರಯತ್ನ ಪಡುತ್ತಿದ್ದು ಇತ್ತ ಸಂಸದರ ಮೂಲಕ ಭಾರತ ಸರ್ಕಾರವೂ ಶ್ರಮಿಸುತ್ತಿರುವು ಶೀಘ್ರ ಬಿಡುಗಡೆಯಾಗುವ ಆಶಾಭಾವನೆ ಇದೆ. ಈ ಸಂಬಂಧ ನಿರಂತರ ಕಾಳಜಿ ವಹಿಸಿ ಸುದ್ದಿ ಬಿತ್ತರಿಸಿದ್ದ ಜಯಪ್ರಕಾಶ್ ಉಪ್ಪಳರವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.
0 Comments