ಕಾಂತಾವರದಲ್ಲಿ ಉತ್ಸಾಹಿ ಬಳಗದಿಂದ ಕೆಸರ್ ಡ್ ಒಂಜಿ‌ ದಿನ

ಜಾಹೀರಾತು/Advertisment
ಜಾಹೀರಾತು/Advertisment


 ಕಾಂತಾವರದಲ್ಲಿ ಉತ್ಸಾಹಿ ಬಳಗದಿಂದ ಕೆಸರ್ ಡ್ ಒಂಜಿ‌ ದಿನ




ಕಾಂತಾವರ : ಯುವಸಂಗಮ ಕಾಂತಾವರ (ರಿ.) ಹಾಗೂ ಯುವ ಉತ್ಸಾಹಿ ಬಳಗ (ರಿ.) ಜಂಟಿ ಆಶ್ರಯದಲ್ಲಿ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮವು ಕಾಂತಾವರ ಪಡುಮರಕಡ ಮಲ್ಲಾಮಾರ್ ಗದ್ದೆಯಲ್ಲಿ ಯುವಸಂಗಮ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆಯಲ್ಲಿ ಜರಗಿತು.


ಶ್ರೀ ಕ್ಷೇತ್ರ ಕಾಂತಾವರ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.


ಸಾಧನೆಗಾಗಿ ಹಿರಿಯ ದೈವ ನರ್ತಕ ಶ್ರೀ ಆನಂದ ಯಾನೆ ಕಾಳು‌ ಪಾಣಾರ ಇವರನ್ನು ಸನ್ಮಾನಿಸಲಾಯಿತು.


ಸಮಾರೋಪ ಸಮಾರಂಭ:* ಕೇಮಾರು ಯುವ ಉತ್ಸಾಹಿ ಬಳಗ ಅಧ್ಯಕ್ಷ ನಿತಿನ್ ಅಮೀನ್ ಅಧ್ಯಕ್ಷತೆಯಲ್ಲಿ , ಕೆ.ಎಂ.ಎಫ್ ಅಧ್ಯಕ್ಷರಾದ ಕೆ.ಪಿ ಸುಚರಿತ ಶೆಟ್ಟಿ ,ಕಾಂತಾವರ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಕೋಟ್ಯಾನ್ , ಅಮಿತಾ ಕೆ ಪೂಜಾರಿ ,ಪ್ರಭಾಕರ ಕುಲಾಲ್, ನಳಿನಿ ಶೆಟ್ಟಿ ,ಕಾಂತಾವರ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷರು ಶ್ಯಾಮ ಕೋಟ್ಯಾನ್ , ಗೌರವ ಅಧ್ಯಕ್ಷರಾದ ಸದಾಶಿವ ಗುಜೆರನ್ , ಶ್ರೀ ಕಾಂತೇಶ್ವರ ಜ್ಯುವೆಲ್ಲರ್ಸ್ ಮಾಲಕರು ದಿನೇಶ್ ಆಚಾರ್ಯ ಕುಂದಿಲ , ಶ್ರೀನಿಧಿ ಸೌಂಡ್ಸ್ ಮಾಲಕರು ಮಹೇಶ್ ಜೆ ಕೋಟ್ಯಾನ್ , ಯುವ ಸಂಗಮ ಕಾಂತಾವರ ಅಧ್ಯಕ್ಷರು ಅಜಿತ್ ಕುಮಾರ್ ಉಪಸ್ಥಿತರಿದ್ದರು.

ಕಾಂತಾವರ ಬೇಲಾಡಿ , ಬಾರಾಡಿ ,ಕೇಮಾರು ಹಾಗೂ ಆಹ್ವಾನಿತ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ವಿಶೇಷ ಆಹ್ವಾನಿತರು ಹಾಗೂ ಗ್ರಾಮದ ಆಸುಪಾಸಿನ ಸ್ಥಳೀಯ ನಾಗರಿಕರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.


ಮಹಾವೀರ ಪಾಂಡಿ, ಮನೀಷ್ ಕುಲಾಲ್, ಸಂದೀಪ್ ಬಾರಾಡಿ, ಸುಕೇಶ್ ಕೋಟ್ಯಾನ್, ಪ್ರಭಾಕರ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರು.


ವಿಜೇತ ತಂಡಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.

Post a Comment

0 Comments