ಮೂಡುಬಿದಿರೆ: ತಿರಂಗ ಯಾತ್ರೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ತಿರಂಗ ಯಾತ್ರೆ



ಮೂಡುಬಿದಿರೆ: ಭಾರತೀಯ ಜನತಾ ಪಾರ್ಟಿ ಮೂಲ್ಕಿ-ಮೂಡುಬಿದಿರೆ ಇದರ ವರ್ಷ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ದಂಗವಾಗಿ ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಸಾವಿರ ಕಂಬ ಬಸದಿಯವರೆಗೆ ತಿರಂಗ ಯಾತ್ರೆ ಬುಧವಾರ ಸಂಜೆ ನಡೆಯಿತು.



ಶಾಸಕ ಉಮಾನಾಥ ಕೋಟ್ಯಾನ್ ಯಾತ್ರೆಗೆ ಚಾಲನೆಯನ್ನು ನೀಡಿದರು.

   ಸಾವಿರ ಕಂಬದ ಬಸದಿ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜೈನ್ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಆಶೀರ್ವಚನ ನೀಡಿದರು.



ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಪುರಸಭಾ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಕುಮಾರ್, ಮುಖಂಡರುಗಳಾದ ಎಂ.ಬಾಹುಬಲಿ ಪ್ರಸಾದ್, ಕಸ್ತೂರಿ ಪಂಜ, ಈಶ್ವರ ಕಟೀಲ್,ಕೇಶವ ಕರ್ಕೇರಾ, ಗೋಪಾಲ್ ಶೆಟ್ಟಿಗಾರ್, ಮೇಘನಾಥ ಶೆಟ್ಟಿ ಸಂತೋಷ್ ಶೆಟ್ಟಿ, ಅಶ್ವಥ್ ಪಣಪಿಲ, ದಿವ್ಯ ವರ್ಮ ಬಲ್ಲಾಳ್, ಸೂರಜ್ ಮಾರ್ನಾಡು ಲಕ್ಷ್ಮಣ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

Post a Comment

0 Comments