ರೋಟರಿ ವಾರದ ಸಭೆಯಲ್ಲಿ ಕಥೆ ಕೇಳುವ ಬನ್ನಿ ಕಾರ್ಯಕ್ರಮ
ಮೂಡುಬಿದಿರೆ: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಅಕ್ಕರೆ ಸಾಹಿತ್ಯ ವೇದಿಕೆ ಅಳಿಯೂರು ಇದರ ಎರಡನೇ ಕಾರ್ಯಕ್ರಮ "ಕಥೆ ಕೇಳುವ ಬನ್ನಿ" ಕಾರ್ಯಕ್ರಮವು ರೋಟರಿ ಶಾಲೆಯ ಸಮ್ಮಿಲನ ಸಭಾಂಗಣದಲ್ಲಿ ಆ. 21ರಂದು ರಾತ್ರಿ ರೋಟರಿ ಕ್ಲಬ್‌ನ ವಾರದ ಸಭೆಯಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಮಾತನಾಡಿ ನಮ್ಮ ಅನುಭವಗಳನ್ನು ಹಂಚಿಕೊಳ್ಳುವುದು ಸುಲಭದ ಕೆಲಸ, ಆದರೆ ಕಥೆ ಕಟ್ವುವುದು ಸುಲಭದ ಕೆಲಸವಲ್ಲ. ಸಮಾಜದಲ್ಲಿ ಆಗುತ್ತಿರುವ ನಮಗಿಷ್ಟವಿಲ್ಲದ ವಿಷಯಗಳಿಗೆ ಮೂರ್ತರೂಪ ನೀಡುವ ಕಾರ್ಯ ಕಥೆಗಾರರಿಂದ ನಡೆಯುತ್ತದೆ. ನಮ್ಮ ಮನಸ್ಸಿಗೆ ಸಮಸ್ಥಿತಿ ನೀಡುವುದೇ ಸಾಹಿತ್ಯದಿಂದ ನಮಗಾಗುವ ಲಾಭವಾಗಿದೆ ಎಂದರು.
ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ರೊ. ನಾಗರಾಜ್ ಬಿ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ವಿಜಯಶ್ರೀ ಹಾಲಾಡಿ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಹಿರಿಯ ಸದಸ್ಯ ರೊ. ಜಯರಾಮ ಕೋಟ್ಯಾನ್ ಈ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವಿಜಯಶ್ರೀ ಹಾಲಾಡಿ "ಏಕತಂತು" ಕಥೆಯನ್ನು, ಶ್ರೀಮತಿ ಅನಿತಾ ಶೆಟ್ಟಿ ಮೂಡುಬಿದಿರೆ ಅವರು "ಕುಡಾರಿ" ಕಥೆಯನ್ನು, ಶಿಕ್ಷಕ ಮಹಾದೇವ ಮೂಡುಕೊಣಾಜೆ ಅವರು "ಅಪ್ಪ ನೆನಪಾದರು" ಕಥೆಯನ್ನು ಮತ್ತು ಇಂದುಚೇತನ ಬೋರುಗುಡ್ಡೆ ಅವರು "ರಂಗಕುಬೇರ" ಕಥೆಯನ್ನು ಪ್ರಸ್ತುತ ಪಡಿಸಿದರು. ಸುನಿಲ್ ಪಣಪಿಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
0 Comments